ಉತ್ತರಪ್ರದೇಶ:

ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಪೋಟ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಕಪ್ತಗಂಜ್ ಪಟ್ಟಣದ ಪಟಾಕಿ ಕಾರ್ಖಾನೆಯಲ್ಲಿ ನಡೆದಿದೆ
ಉತ್ತರ ಪ್ರದೇಶದ ಖುಷಿ ನಗರದಲ್ಲಿ ಪರವಾನಗಿ ರಹಿತ ಪಟಾಕಿ ಗೋದಾಮಿನಲ್ಲಿ ಬುಧವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಕಪ್ತಾನ್ಗಂಜ್ನ ಆರ್ಯ ಸಮಾಜ ದೇವಸ್ಥಾನ ವಾರ್ಡ್ನ ಮನೆಯೊಂದರ ಗೋದಾಮಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಡಲಾಗಿತ್ತು. ಅಲ್ಲಿದ್ದ ಸಿಲಿಂಡರ್ನಲ್ಲಿ ಗ್ಯಾಸ್ ಸೋರಿಕೆಯ ಆಗಿ ಸ್ಫೋಟ ಸಂಭವಿಸಿದ್ದು, ಜತೆಗೆ ಪಟಾಕಿ ದಾಸ್ತಾನು ಕೂಡ ಸಿಡಿದಿತ್ತು. ಈ ಸಂದರ್ಭ ನಾಲ್ವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ದೀಪಾವಳಿ ಸಮೀಪಿಸುತ್ತಿರುವಂತೆ ಉತ್ತರ ಪ್ರದೇಶದ ವಿವಿಧೆಡೆ ಪಟಾಕಿಗಳು, ಬಾಣ-ಬಿರುಸುಗಳು ಮತ್ತು ಸಿಡಿಮದ್ದುಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿರುವ ಅಪಾಯಕಾರಿ ವಿದ್ಯಮಾನಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅನಾಹುತದ ಸುದ್ದಿಗಳು ಒಂದರ ಬೆನ್ನ ಹಿಂದೊಂದರಂತೆ ವರದಿ ಆಗುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








