ಉಪ್ಪಿನಂಗಡಿ :
ಅಡಿಕೆ ವ್ಯಾಪಾರಿಗೆ ಚೂರಿ ಇರಿದು 4 ಲಕ್ಷ ರೂ. ದರೋಡೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪೆರ್ನೆಯಲ್ಲಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 75ರ ಪೆರ್ನೆಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಅಡಿಕೆ ವ್ಯಾಪಾರಿ ಪದೆಬರಿ ದೀಪಕ್ ಶೆಟ್ಟಿ ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ.
ಇವರು ಪೆರ್ನೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು, ರಾತ್ರಿ ಅಂಗಡಿ ಮುಚ್ಚಿ ಬೈಕಿನಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ತಂಡವು ಕೃತ್ಯ ಎಸಗಿ ಪರಾರಿ ಆಗಿದೆ. ಚೂರಿಯಿಂದ ತಿವಿಯಲ್ಪಟ್ಟ ದೀಪಕ್ ಶೆಟ್ಟಿ ಕುತ್ತಿಗೆ ಮತ್ತು ಬೆನ್ನಿಗೆ ತೀವ್ರ ಗಾಯಗಳಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.
ಖಚಿತ ಮಾಹಿತಿ ಹೊಂದಿದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ