ರಾಜ್ಯಕ್ಕೆ 4 ಹೊಸ ತಾಲ್ಲೂಕುಗಳ ಸೇರ್ಪಡೆ!!!

ಬೆಂಗಳೂರು:

      ಕುಮಾರಸ್ವಾಮಿ ಅವರು ಮಂಡಿಸಿರುವ 2019-20ನೇ ಸಾಲಿನ ಬಜೆಟ್‌ನಲ್ಲಿ ನಾಲ್ಕು ಹೊಸ ತಾಲ್ಲೂಕುಗಳ ರಚನೆ ಮಾಡಲಾಗಿದೆ.

      ಚಿಕ್ಕಬಳ್ಳಾಪುರದ ಚೇಳೂರು, ಚಿಕ್ಕಮಗಳೂರಿನ ಕಳಸ, ರಾಮನಗರದ ಹಾರೋಹಳ್ಳಿ, ಬಾಗಲಕೋಟೆಯ ತೇರದಾಳವನ್ನು ಹೊಸ ತಾಲ್ಲೂಕನ್ನಾಗಿ ರಚಿಸಲಾಗಿದೆ.

     ಇದನ್ನು ಹೊರತುಪಡಿಸಿ ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರವಾಡ ಹಾಗೂ ಕೊಡಗು ಜಿಲ್ಲೆಗಳನ್ನು ಡ್ರೋನ್ ಮೂಲಕ ರೀ-ಸರ್ವೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು 227 ತಾಲೂಕುಗಳಿದ್ದು, ಈ ನಾಲ್ಕು ಸೇರಿದರೆ 231 ತಾಲೂಕುಗಳಾಗಿವೆ.

      ಹಲವು ಹೊಸ ತಾಲ್ಲೂಕುಗಳ ರಚನೆಗೆ ಈ ಬಾರಿ ಒತ್ತಾಯ ಹೇರಲಾಗಿತ್ತಾದರೂ, ಬಜೆಟ್‌ನಲ್ಲಿ 4 ತಾಲ್ಲೂಕುಗಳನ್ನು ಮಾತ್ರವೇ ಹೊಸದಾಗಿ ವಿಂಗಡಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link