ಗುಂಡು ಹಾರಿಸಿಕೊಂಡು ತುಮಕೂರಿನ ಮೂಲದ ಒಂದೇ ಕುಟುಂಬದ ಐವರ ಸಾವು!!

ಚಾಮರಾಜನಗರ :

 

      ಒಂದೇ ಕುಟುಂಬದ 5 ಮಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ಬಳಿಯ ಜಮೀನೊಂದರಲ್ಲಿ ನಡೆದಿದೆ.

      ಮೃತರು ಓಂಕಾರ್(38), ಪತ್ನಿ ನಿಖಿತಾ(28), ಪುತ್ರ ಆರ್ಯ(5), ಭಟ್ಟಾಚಾರ್ಯ(70), ಹೇಮಾ (55) ಎಂದು ಗುರುತಿಸಲಾಗಿದೆ. ಇವರು ಮೈಸೂರಿನ ದಟ್ಟಗಹಳ್ಳಿಯ ನಿವಾಸಿಗಳಾಗಿದ್ದು ಮೇಲ್ನೋಟಕ್ಕೆ ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

      ಮೃತರು ಮೂಲತಃ ತುಮಕೂರಿನವರು ಎಂದು ತಿಳಿದು ಬಂದಿದೆ. ಆದರೆ ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾಗಿದ್ದರು. 3 ದಿನದ ಹಿಂದೆ ರಾತ್ರಿ ಮೈಸೂರಿನ ದಟ್ಟಗಳ್ಳಿಯಿಂದ ಗುಂಡ್ಲುಪೇಟೆಗೆ ಈ ಐವರು ಬಂದಿದ್ದರು. ನಂದಿ ಲಾಡ್ಜ್​ನಲ್ಲಿ ರೂಂ ಬುಕ್ ಮಾಡಿಕೊಂಡಿದ್ದ ಓಂಪ್ರಕಾಶ್​ ಕುಟುಂಬ ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದರು. ಇಂದು ಮುಂಜಾನೆ ಗುಂಡ್ಲುಪೇಟೆಯ ಹೊರವಲಯದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

      ಮೃತರ ಕುಟುಂಬಸ್ಥರು ಕೆಲ ವರ್ಷಗಳ ಹಿಂದೆ ಡಾಟಾಬೇಸ್ ಕಂಪನಿ ನಡೆಸುತ್ತಿದ್ದರು. ಕಳೆದೆರೆಡು ವರ್ಷಗಳಿಂದ ಹಣಕಾಸಿನ ಸಮಸ್ಯೆಗೆ ಸಿಲುಕಿ ಕಂಪನಿ ಮುಚ್ಚಿದ್ದಾರೆ. ಎರಡು ವರ್ಷಗಳಿಂದ ಸಾಲದ ಸುಳಿಗೆ ಮನನೊಂದಿದ್ದರು ಎನ್ನಲಾಗುತ್ತಿದೆ. ಮೃತರ ಕುಟುಂಬಸ್ಥರು ಮೂಲತಃ ತುಮಕೂರು ಕಡೆಯವರು. ಕೃತ್ಯಕ್ಕೆ ನಿಖರ ಕಾರಣ ತಿಳಿಯಬೇಕಿದೆ.

       ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯ ನಂತರ ತಿಳಿಯಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap