ಚಿಕ್ಕೋಡಿ:
ಶಾಲಾ ಬಸ್ ಬೈಕ್ ಮೇಲೆ ಹರಿದ ಪರಿಣಾಮ 5 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.
ರಾಜನಂದಿನಿ (5) ಮೃತಪಟ್ಟ ಬಾಲಕಿ. ಈಕೆ ತನ್ನ ತಾಯಿ ಜೊತೆ ಬೈಕ್ನಲ್ಲಿ ತೆರಳುತ್ತಿದ್ದಳು. ಸಹೋದರ ಮಾವ ಬೈಕ್ ಚಾಲನೆ ಮಾಡುತ್ತಿದ್ದರು. ಬೈಕ್ ಮೆಹಬೂಬ್ ನಗರದ ಬಳಿ ಚಲಿಸುತ್ತಿದ್ದ ವೇಳೆ ಎದುರಿನ ತಿರುವಿನಿಂದ ವೇಗವಾಗಿ ಬಂದ ಸೇಂಟ್ ಫ್ರಾನ್ಸಿಸ್ ಶಾಲೆಯ ಬಸ್ ಬೈಕ್ ಮೇಲೆ ಹರಿಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ವೇಳೆ ಬಾಲಕಿ ಮೃತಪಟ್ಟಿದ್ದು ಬೈಕ್ನಲ್ಲಿದ್ದ ತಾಯಿ ಹಾಗೂ ಸಹೋದರ ಮಾವ ಇಬ್ಬರಿಗೂ ಗಾಯಗಳಾಗಿವೆ. ಬಸ್ನಲ್ಲಿ ವಿದ್ಯಾರ್ಥಿಗಳು ಇದ್ದರು ಎನ್ನಲಾಗಿದೆ.
ಇನ್ನು ಈ ಸಂಬಂಧ ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ