ಮೈಸೂರು:
ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ರೈಫಲ್ ಗಳಿಗೆ ಬಳಕೆಯಾಗುವ 50 ಬುಲೆಟ್ ಗಳು ಕಡಿಮೆ ಇರುವುದು ಕಂಡು ಬಂದಿವೆ.
ಪೊಲೀಸ್ ಠಾಣೆಗಳಲ್ಲಿರುವ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸುವ ಜವಾಬ್ದಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮದ್ದುಗುಂಡು ಪರಿಶೀಲನಾ ತಂಡದ್ದಾಗಿರುತ್ತದೆ. ಇವರು ನಿಗದಿತವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪರಿಶೀಲಿಸುತ್ತಾರೆ. ವಾಡಿಕೆಯಂತೆ ಶನಿವಾರ ಟಿ.ನರಸೀಪುರ ಠಾಣೆಯ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದಾಗ 50 ಬುಲೆಟ್‌ಗಳು ಕಡಿಮೆ ಇರುವುದು ಕಂಡುಬಂದಿದೆ. ಆದರೆ, ಹೇಗೆ ಕಾಣೆಯಾದವು ಎಂಬ ಕುರಿತು ಠಾಣಾಧಿಕಾರಿ ಸೇರಿದಂತೆ ಯಾವ ಸಿಬ್ಬಂದಿಗೂ ಮಾಹಿತಿಯಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ.
ಅಷ್ಟು ಬುಲೆಟ್‌ಗಳು ಹೇಗೆ ಕಾಣೆಯಾದವು ಎಂಬುದರ ಬಗ್ಗೆ ಈಗ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.
ಹೇಗೆ ಈ ಬುಲೆಟ್ ಗಳು ಕಡಿಮೆ ಆಗಿವೆ ಎಂದು ತನಿಖೆಯಿಂದ ತಿಳಿದು ಬರಬೇಕಿದ್ದು, ಡಿವೈಎಸ್ ಪಿ ತನಿಖೆ ನಡೆಸುತ್ತಿದ್ದಾರೆ ಎಂದು ಮೈಸೂರು ಎಸ್‌ಪಿ ಸಿಬಿ ರಿಶ್ಯಂತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ