6 ಪೊಲೀಸ್ ಅಧಿಕಾರಿಗಳ ವರ್ಗಾವಣೆ!!!

ಬೆಂಗಳೂರು: 

      ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಆರು ಮಂದಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು (ಎಎಸ್ಪಿ) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

      ವಿ.ಜೆ.ಸಜೀತ್- ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಬೆಂಗಳೂರು ಗ್ರಾ.ಜಿಲ್ಲೆ), ಮಲ್ಲಿಕಾರ್ಜುನ ಬಾಲದಂಡಿ – ಸಿಐಡಿ ಅಧೀಕ್ಷಕರು, ಪ್ರಭಾಕರ್ ಭೀ ಬಾರ್ಕಿ- ಚಿತ್ರದುರ್ಗ, ರಾಮಲಕ್ಷ್ಮಣ್ ಅರೆಸಿದ್ಧಿ- ಬೆಳಗಾವಿ, ಶ್ರುತಿ- ಚಿಕ್ಕಮಗಳೂರು, ಬಿ. ಎಸ್.ನೇಮಗೌಡ- ವಿಜಯಪುರ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಲಾಗಿದೆ.

      ಈ ಮೇಲೆ ವರ್ಗಾವಣೆ ಮಾಡಲಾಗಿರುವ ಕೆಲ ಅಧಿಕಾರಿಗಳನ್ನು ಡಿವೈಎಸ್ಪಿ ಹುದ್ದೆಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗೆ ಕೆಲ ತಿಂಗಳ ಹಿಂದೆ ಬಡ್ತಿ ನೀಡಲಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ