ಲಾಕ್’ಡೌನ್ : ರಾಜ್ಯದ ದೇವಾಲಯಗಳಿಂದ 600 ಕೋಟಿ ನಷ್ಟ!!

ಉಡುಪಿ:

     ಕೋವಿಡ್-19 ನಿಂದ ಲಾಕ್ ಡೌನ್ ಆದ ಪರಿಣಾಮ ರಾಜ್ಯದ ಮುಜರಾಯಿ ದೇವಲಾಯಗಳಲ್ಲಿ ಅಂದಾಜು 600 ಕೋಟಿ ನಷ್ಟವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

      ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ನಿಂದ ಲಾಕ್ ಡೌನ್ ಆದ ಪರಿಣಾಮ ರಾಜ್ಯದ ಮುಜರಾಯಿ ದೇವಲಾಯಗಳಲ್ಲಿ ಅಂದಾಜು 600 ಕೋಟಿ ನಷ್ಟವಾಗಿದೆ. ಕೊಲ್ಲೂರು ದೇವಾಲಯವೊಂದರಲ್ಲಿ ಎಪ್ರಿಲ್ ಮೇ ತಿಂಗಳಲ್ಲಿ14 ಕೋಟಿ ನಷ್ಟವಾಗಿದೆ ‌. ಎಲ್ಲಾ ದೇವಸ್ಥಾನ ಮುಚ್ಚಿದ ಪರಿಣಾಮ ಈ ನಷ್ಟವಾಗಿದೆ. ಎ ದರ್ಜೆ ಮತ್ತು ಬಿ ದರ್ಜೆ ದೇವಸ್ಥಾನಗಳಲ್ಲಿ ವಾರ್ಷಿಕ ಶೇಕಡ 35 ರಷ್ಟು ಆದಾಯ ಕಡಿಮೆಯಾಗಿದೆ ಎಂದು ತಿಳಿಸಿದರು.

Minister Kota Srinivas Poojary visits development works in Udupi

     ಕೋವಿಡ್-19 ಲಾಕ್ ಡೌನ್ ಕಾರಣದಿಂದ ರಾಜ್ಯದ ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಆದರೆ ನಂತರ ಜೂನ್ 1 ರಿಂದ ದೇವಸ್ಥಾನಗಳನ್ನು ತೆರೆಯಬೇಕೆಂದು ನಿರ್ಧರಿಸಲಾಗಿದ್ದರೂ, ಕೇಂದ್ರ ಸರ್ಕಾರ ನೀಡಿರುವ ನೂತನ ಮಾರ್ಗಸೂಚಿಯ ಮೇರೆಗೆ ಜೂನ್ 8 ಕ್ಕೆ ಮುಂದೂಡಲಾಗಿದ್ದು, ಎಲ್ಲಾ ಭಕ್ತರು ಸಹಕರಿಸಬೇಕಾಗಿ ತಿಳಿಸಿದ್ದಾರೆ.

      ಜೂನ್ 8 ನೇ ತಾರೀಕಿನಂದು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದೇವಸ್ಥಾನಗಳನ್ನು ತೆರೆಯಲಾಗುವುದು. ಇಲಾಖಾ ಅಧಿಕಾರಿಗಳಿಗೆ ಮಾರ್ಗಸೂಚಿ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap