ಕೊರೋನಾ : ರಾಜ್ಯದಲ್ಲಿ ಇಂದು 69 ಮಂದಿಗೆ ಸೋಂಕು!!

ಬೆಂಗಳೂರು:

      ರಾಜ್ಯದಲ್ಲಿ ಇಂದು 69 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 2158 ಕ್ಕೆ ಏರಿಕೆಯಾಗಿದೆ.

      ಇಂದು ಉಡುಪಿಯಲ್ಲಿ 16, ಯಾದಗಿರಿಯಲ್ಲಿ 15, ಕಲಬುರಗಿಯಲ್ಲಿ 14 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ ಮೂರು ಪ್ರಕರಣಗಳು, ಬಳ್ಳಾರಿಯಲ್ಲಿ ಮೂರು, ಬೆಂಗಳೂರು ನಗರದಲ್ಲಿ ಆರು ಪ್ರಕರಣಗಳು ದೃಢವಾಗಿದೆ. ಈವರೆಗೆ ಯಾವುದೇ ಪ್ರಕರಣವಿಲ್ಲದೆ ಇದ್ದ ರಾಮನಗರದಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾಗಿದೆ.

      ಈ ಮೂಲಕ ಕರ್ನಾಟಕದಲ್ಲಿ ಇಂದು 69 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ 2158 ಕ್ಕೆ ಏರಿಕೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link