ಬೆಂಗಳೂರು :

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರ್ಜರಿ ಸಿಹಿಸುದ್ದಿ ನೀಡಿದ್ದು, 1,250 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಲಾಕ್ ಡೌನ್ ಪ್ಯಾಕೇಜ್ ಘೋಷಣೆ ಕುರಿತಂತೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಹಿರಿಯ ಸಚಿವರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, 1250 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಹೂವು ಬೆಳಗಾರರಿಗೆ ಪ್ರತಿ ಹೆಕ್ಟರ್ ಹೂ ಹಾನಿಗೆ 10 ಸಾವಿರ ಸಹಾಯಧನ, ಹಣ್ಣು ಮತ್ತು ತರಕಾರಿ ಬೆಳಗಾರರಿಗೆ ಒಂದು ಹೆಕ್ಟರ್ ಗೆ 10 ಸಾವಿರ ಸಹಾಯಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿಶೇಷ ಆರ್ಥಿಕ ನೆರವು:
1) ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂ ಪರಿಹಾರ
2) ಅಟೋ, ಟ್ಯಾಕ್ಸಿ ಚಾಲಕರಿಗೆ 3 ಸಾವಿರ ರೂ ಪರಿಹಾರ
3) ಕಲಾವಿದರು, ಕಲಾ ತಂಡಗಳಿಗೆ 3 ಸಾವಿರ ರೂ ಪರಿಹಾರ
4) ಸವಿತಾ ಸಮಾಜದವರಿಗೆ 3 ಸಾವಿರ ಸಹಾಯಧನ
5) ಹೂವು ಬೆಳೆಗಾರರಿಗೆ ಹೆಕ್ಟೆರ್ ಗೆ 10 ಸಾವಿರ ರೂ.
6) ಬಹುತೇಕ ಎಲ್ಲಾ ಶ್ರಮಿಕ ವರ್ಗದವರಿಗೆ 3 ಸಾವಿರ ಸಹಾಯಧನ ನೀಡಲಾಗುತ್ತದೆ.
7) ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ಹೆಕ್ಟೇರ್ ಗೆ 10 ಸಾವಿರ ರೂ
ಕಟ್ಟಡ ಕಾರ್ಮಿಕರಿಗೆ 3000 ರೂ. (ಒಟ್ಟು 493 ಕೋಟಿ), ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ (3.5 ಲಕ್ಷ ಜನರು 65 ಕೋಟಿ ರೂ.) ರಸ್ತೆ ವ್ಯಾಪಾರಿಗಳು (2 ಲಕ್ಷ ಜನರು 45.ಕೋಟಿ), ಕಲಾವಿದರಿಗೆ ತಲಾ 3000 ರೂ (ಸುಮಾರು 4 ಕೋಟಿ). ಸಣ್ಣ ಮತ್ತು ಮಧ್ಯಮ ಅವಧಿ ಸಾಲ ಪಡೆದ ಮರು ಪಾವತಿ ಅವಧಿ 31-7-21 ಕ್ಕೆ ವಿಸ್ತರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








