ಒಳಚರಂಡಿ ಸ್ವಚ್ಛತೆ ವೇಳೆ ಉಸಿರುಗಟ್ಟಿ 7 ಮಂದಿ ಸಾವು!

ವಡೋದರ:

       ಹೋಟೆಲ್ ನ ಒಳ ಚರಂಡಿ ಸ್ವಚ್ಛತೆಗೆಂದು ಇಳಿದ 7 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ದುರ್ಘಟನೆ  ವಡೋದರ ಸಮೀಪದ ಫರ್ತಿಕ್ವೈ ಎಂಬಲ್ಲಿ ನಡೆದಿದೆ.

       ಮೃತ ಹೋಟೆಲ್‌ ಸಿಬ್ಬಂದಿಯನ್ನು ಜೈ ವಾಸವ (24), ವಿಜಯ್‌ ಚೌಹಾಣ್‌ (22), ಸಹದೇವ ವಾಸವ (22) ಎಂದು ಗುರುತಿಸಲಾಗಿದೆ. ಮೃತ ಪೌರ ಕಾರ್ಮಿಕರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

        ಕಳೆದ 3 ದಿನಗಳಿಂದ ಇಲ್ಲಿನ ಹೊಟೆಲ್ ನ ಒಳಚರಂಡಿ ಕಟ್ಟಿಕೊಂಡಿತ್ತು. ಇದರ ಸ್ವಚ್ಛತೆಗಾಗಿ ನಾಲ್ಕು ಮಂದಿ ಕಾರ್ಮಿಕರು ಆಗಮಿಸಿದ್ದರು. ಒಳಚರಂಡಿ ಒಳಗೆ ಇಳಿದಿದ್ದ ನಾಲ್ಕು ಮಂದಿ ಕಾರ್ಮಿಕರು ಸುಮಾರು ಗಂಟೆಗಳೇ ಕಳೆದರೂ ಹೊರಗೆ ಬರಲಿಲ್ಲ. ಅನುಮಾನಗೊಂಡ ಹೊಟೆಲ್ ನ ಮೂವರು ಸಿಬ್ಬಂದಿಗಳು ಒಳಚರಂಡಿ ಒಳಗೆ ಇಳಿದಿದ್ದು, ಆಗ ಅವರೂ ಕೂಡ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ದೇಹಗಳನ್ನು ಹೊರತೆಗೆದಿದ್ದಾರೆ.

      ಸ್ವಚ್ಛತೆಗಾಗಿ ಚರಂಡಿಯೊಳಗೆ ಇಳಿದಿದ್ದ ಕಾರ್ಮಿಕರು ಕುಸಿದಿದ್ದು, ಈ ವೇಳೆ ಅವರನ್ನು ರಕ್ಷಿಸಲು ಹೊಟೆಲ್ ಕಾರ್ಮಿಕರು ಕೂಡ ಚರಂಡಿಯೊಳಗೆ ಇಳಿದಿದ್ದಾರೆ. ಆಗ ಅವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಕಿರಣ್ ಜವೇರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

       ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link