ಬೆಂಗಳೂರು:
ಕಾನೂನು ನಿಯಮ ಉಲ್ಲಂಘಿಸಿ ನಡೆಸುತ್ತಿದ್ದ ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿದ ಪೊಲೀಸರು 74 ಮಂದಿ ಮಹಿಳೆಯರನ್ನು ರಕ್ಷಿಸಿದ್ದು, 53 ಮಂದಿಯನ್ನು ಬಂಧಿಸಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ ಬಿಆರ್ ರವಿಕಾಂತೇಗೌಡ ಅವರ ನಿರ್ದೇಶನದ ಮೇರೆಗೆ ಪೊಲೀಸ್ ತಂಡ ಬೆಂಗಳೂರು ನಗರದ ಜೀವನ ಭೀಮನಗರ ಪೊಲೀಸ್ ಠಾಣಾ ಸರಹದ್ದಿನ ದೊಮ್ಮಲೂರು ರಿಂಗ್ ರಸ್ತೆಯಲ್ಲಿರುವ CHEF INN REGENCY ಎಂಬಲ್ಲಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಡ್ಯಾನ್ಸ್‌ಬಾರ್ ನಡೆಸುತ್ತಿದ್ದ ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿ, ಡ್ಯಾನ್ಸ್‌ಬಾರ್‌ನಲ್ಲಿದ್ದ 48 ಜನ ಗಿರಾಕಿಗಳು ಸೇರಿದಂತೆ ಒಟ್ಟು 53 ಜನರನ್ನು ದಸ್ತಗಿರಿ ಮಾಡಿ 1.04 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ.
ಡ್ಯಾನ್ಸ್ ಬಾರ್‌ನ ವ್ಯವಸ್ಥಾಪಕ ದಿನೇಶ್, ಕ್ಯಾಷಿಯರ್ ದಿನೇಶ್ ಕುಮಾರ್, ರಿಯಾಜುದ್ದೀನ್, ಪ್ರಕಾಶ್ ದತ್ ಜೋಶಿ ಮತ್ತು ಹೆಗೈರಾಜ್ ಜೋಶಿ ಎಂಬುವರನ್ನು ಬಂಧಿಸಲಾಗಿದೆ.
ಡ್ಯಾನ್ಸ್‌ಬಾರ್‌ಗೆ ಬರುವ ಗಿರಾಕಿಗಳ ಜೊತೆ ಡ್ಯಾನ್ಸ್ ಮಾಡಲು ಕಳುಹಿಸಿಕೊಡಲು ಇರಿಸಿಕೊಂಡಿದ್ದ ಸ್ಥಳೀಯ ಹಾಗೂ ಹೊರ ರಾಜ್ಯದ 74 ಮಹಿಳೆಯರನ್ನು ಸಂರಕ್ಷಣೆ ಮಾಡಲಾಗಿರುತ್ತದೆ.ರಕ್ಷಿಸಿದ ಹುಡುಗಿಯರಲ್ಲಿ ಕೆಲವರು ಸ್ಥಳಿಯರಾಗಿದ್ದು, ಕೆಲವರು ಬೇರೆ ರಾಜ್ಯಕ್ಕೆ ಸೇರಿದವರಾಗಿದ್ದಾರೆ.
ಈ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ