ಬೆಂಗಳೂರು :

ಯಲಹಂಕದ ಏರ್ ಬೇಸ್ ನಲ್ಲಿ ವಿಶ್ವವಿಖ್ಯಾತ ಏರ್ ಶೋ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏರ್ಪೋರ್ಟ್ ಕಡೆ ಹೋಗುವ ದಾರಿಯುದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಏರ್ ಪೋರ್ಟ್ ರಸ್ತೆ ಯಲಹಂಕ ವಾಯುನೆಲೆ ಹತ್ತಿರ ಗಣ್ಯ, ಅತಿಗಣ್ಯ, ತುರ್ತು ವಾಹನ, ಬಿಎಂಟಿಸಿ , ಕೆಎಸ್‌ಆರ್ ಟಿ ಹೊರತುಪಡಿಸಿ ಸಾರಿಗೆ ಸಂಚಾರಕ್ಕೆ ನಿಷೇಧ ಮಾಡಲಾಗಿದೆ.
ಇತ್ತ ಹೆಬ್ಬಾಳ ಫ್ಲೈ ಓವರ್ ನಿಂದ MVIT ಜಂಕ್ಷನ್‍ವರೆಗೂ ಭಾರೀ ವಾಹನ ಸಂಚಾರವನ್ನು ನಿಷೇಧಿಸಿದ್ದು, ಲಾರಿ, ಟ್ರಕ್, ಖಾಸಗಿ ಬಸ್ ಇತರೆ ಭಾರೀ ಸರಕು ಸಾಗಾಣೆ ವಾಹನ ನಿಷೇಧ ಮಾಡಲಾಗಿದೆ.
ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸುಗಮ ಸಂಚಾರ ವ್ಯವಸ್ಥೆಗಾಗಿ 3 ಡಿಸಿಪಿ, 7 ಎಸಿಪಿ, 33 ಪೊಲೀಸ್ ಇನ್ಸ್ ಪೆಕ್ಟರ್ಸ್, 137 ಪಿಎಸ್‍ಐ, 211 ಎಸ್‍ಡಿಐ, 447 ಹೆಡ್ ಕಾನ್ಸ್ ಟೇಬಲ್ ಮತ್ತು 648 ಪಿಸಿಗಳು ಸೇರಿದಂತೆ ಒಟ್ಟು 1478 ಜನ ಸಂಚಾರಿ ಪೊಲೀಸರ ನಿಯೋಜನೆಯನ್ನು ಮಾಡಲಾಗಿದೆ.
ಪ್ಯಾಲೇಸ್ ರೋಡ್, ಮೇಕ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ಏರ್ ಪೋರ್ಟ್ ರೋಡ್ ನಿಂದ ಯಲಹಂಕದ ರಸ್ತೆಯವರೆಗೂ ಫುಲ್ ಜಾಮ್ ಆಗಿದೆ. ಸುಮಾರು 8 ಕಿ.ಮೀ ವಾಹನಗಳು ಸಾಲುಗಟ್ಟಿ ನಿಂತಿವೆ. ಏರ್ ಪೋರ್ಟ್ ಕಡೆ ಹೋಗುವ ದಾರಿಯುದ್ಧಕ್ಕೂ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








