ಬೆಂಗಳೂರು :
ಕೇಂದ್ರ ಸಚಿವ ಸಂಪುಟದ ಪುನರಚನೆಗೆ ಕ್ಷಣಗಣನೆಗೆ ಆರಂಭವಾಗಿದ್ದು, ಕರ್ನಾಟಕದ ನಾಲ್ವರು ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಮತ್ತು ಬೀದರ್ ಸಂಸದ ಭಗವಂತ್ ಖೂಭಾ ಅವರು ಸಚಿವರ ಪರಿಷತ್ ಗೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಂದ್ರಶೇಖರ್, ಶೋಭಾ ಮತ್ತು ನಾರಾಯಣಸ್ವಾಮಿ ಅವರು ಬೆಳಿಗ್ಗೆ ಪ್ರಧಾನಮಂತ್ರಿಯವರು ಕರೆದಿದ್ದ ಹೊಸದಾಗಿ ಸೇರ್ಪಡೆಗೊಂಡ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು, ಭಗವಂತ್ ಖೂಭಾ ಅವರಿಗೆ ಇಂದು ಪ್ರಧಾನಿ ಕಚೇರಿಯಿಂದ ಕರೆ ಬಂತು. ಭಗವಂತ್ ಖೂಭಾ ಹೈದರಾಬಾದ್ ನಿಂದ ದೆಹಲಿಗೆ ತೆರಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ