ಶಿವಮೊಗ್ಗ :
ತಾಯಿ ಮೃತದೇಹದ ಜೊತೆ ಮಗಳು 5 ದಿನ ಕಳೆದಿರುವ ಘಟನೆ ಜಿಲ್ಲೆಯ ಬಸವನಗುಡಿಯಲ್ಲಿ ನಡೆದಿದೆ.
ಕಳೆದ ಹಲವು ವರ್ಷಗಳಿಂದ ಮೃತ ರಾಜೇಶ್ವರಿ ಸ್ತನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ವರಿ ಕಳೆದ ಐದು ದಿನದ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಮಾತ್ರೆ ಸೇವಿಸಿರುವ ಕಾರಣ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಅವರ ಮಗಳು ತಾಯಿ ಮೃತಪ್ಟಟಿರುವ ವಿಷಯವನ್ನು ಯಾರಿಗೂ ತಿಳಿಸಿಲ್ಲ. ಅಲ್ಲದೇ ಶವ ಸಂಸ್ಕಾರ ಸಹ ಮಾಡದೇ ಮನೆಯಲ್ಲೇ ಶವ ಇಟ್ಟುಕೊಂಡಿದ್ದಾಳೆ. ಶವದ ಜೊತೆ ಮನೆಯಲ್ಲೇ 5 ದಿನ ಅಕೆಯೂ ಕಾಲ ಕಳೆದಿದ್ದಾರೆ.
ಶವ ಕೊಳೆತು ವಾಸನೆ ಬಂದಾಗ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಮನೆಯ ಹತ್ತಿರ ಬಂದು ಬಾಗಿಲು ಮುರಿದು ಒಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ರಾಜೇಶ್ವರಿ ಪತಿ ಕಳೆದ 20 ವರ್ಷದ ಹಿಂದೆಯೇ ಮೃತಪಟ್ಟಿದ್ದರು ಎನ್ನಲಾಗಿದೆ. ಮನೆಯಲ್ಲಿ ತಾಯಿ-ಮಗಳು ಇಬ್ಬರೇ ವಾಸಿಸುತ್ತಿದ್ದು, ಮಗಳು ಶಾಂಭವಿ ಯಾರ ಜೊತೆಗೆ ಹೆಚ್ಚು ಮಾತನಾಡುತ್ತಿರಲಿಲ್ಲವಂತೆ. ಮಾನಸಿಕ ಅಸ್ವಸ್ಥೆ ಎನ್ನಲಾಗಿದ್ದು, ಇದೀಗ ಆಕೆಯನ್ನು ಪೊಲೀಸರು ಸುರಭಿ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ