ಕೊರಟಗೆರೆ :
ಪತ್ನಿಯ ಮುಂದೆಯೇ ನವ ವರನನ್ನು 6 ಮಂದಿ ದುಷ್ಕರ್ಮಿಗಳು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೊರಟಗೆರೆ ತಾಲೂಕಿನ ಜಿ.ನಾಗೇನಹಳ್ಳಿ ಬಳಿ ನಡೆದಿದೆ.
ವಿುಡಿಗೇಶಿಯ ಬಿದರಕೆರೆ ಗ್ರಾಮದ ಶೀನಿವಾಸ್ (27) ಮೃತ ದುರ್ದೈವಿ. ಶ್ರೀನಿವಾಸ್ ಮತ್ತು ಆತನ ಪತ್ನಿ ಅಕ್ಷತಾ ಮಧುಗಿರಿಯಿಂದ ಕಾರಿನಲ್ಲಿ ತೆರಳುತ್ತಿದ್ದ ವೇಳೆ ದಾಳಿ ಮಾಡಿದ ಆರು ಜನರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.
ಬಾಗಲಗುಂಟೆಯಲ್ಲಿ ಹೂ ವ್ಯಾಪಾರ ಮಾಡುತ್ತಿದ್ದ ಶ್ರೀನಿವಾಸ್ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಯುವತಿ ಅಕ್ಷತಾಳನ್ನು ಪ್ರೀತಿಸಿದ್ದ ಶ್ರೀನಿವಾಸ್ ಹದಿನೈದು ದಿನಗಳ ಹಿಂದಷ್ಟೆ ರಿಜಿಸ್ಟರ್ ಮದುವೆ ಆಗಿದ್ದ. ನಂತರ ಎರಡೂ ಕುಟುಂಬದವರ ರಾಜಿ ಪಂಚಾಯಿತಿ ಮಾಡಿ ನವವಿವಾಹತರನ್ನು ಮನೆಗೆ ಸೇರಿಸಿಕೊಂಡಿದ್ದರು.
ಮದುವೆಯಾದ ಬಳಿಕ ಇಂದು ಮೊದಲ ಬಾರಿಗೆ ಹುಟ್ಟೂರಿಗೆ ಬಂದಿದ್ದ ಶ್ರೀನಿವಾಸ್ ಹಿಂದುರಿಗಿ ಬೆಂಗಳೂರಿಗೆ ತೆರಳುವ ವೇಳೆ ಕೊರಟಗೆರೆ ಸಮೀಪದ ಜಿ ನಾಗೇನಹಳ್ಳಿ ಬಳಿ ಕಾರಿನಲ್ಲಿ ಬಂದ ಆರು ಮಂದಿ ಗುಂಪು ಮಾರಕಾಸ್ತ್ರಗಳಿಂದ ಶ್ರೀನಿವಾಸ್ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆಗೆ ಹಳೆ ದ್ವೇಷ ಕಾರಣ ಎನ್ನಲಾಗುತ್ತಿದ್ದು, ಆತನ ಸ್ನೇಹಿತರೇ ಕೊಲೆ ಮಾಡಿದ್ದಾಗಿ ಅನುಮಾನಿಸಲಾಗಿದೆ.
ಘಟನೆಯಿಂದ ಯುವತಿ ಬೆಚ್ಚಿಬಿದ್ದಿದ್ದು, ಆಕೆಯನ್ನು ಆಕೆಯ ಮನೆಯವರು ಕರೆದುಕೊಂಡು ಹೋಗಿದ್ದಾರೆ. ಇನ್ನು ಈ ಸಂಬಂಧ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ