ಭಾಗಮಂಡಲ:
ಅಡಿಕೆ ಕದಿಯಲು ಬಂದಿದ್ದ ಕಳ್ಳನ ಮೇಲೆ ಮಾಲಿಕ ಫೈರಿಂಗ್ ನಡೆಸಿದ್ದು, ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿನ ಕರಿಕೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ದೇವಂಗೋಡಿ ಗಣೇಶ್ ಗುಂಡಿನ ದಾಳಿಯಿಂದ ಮೃತಪಟ್ಟ ವ್ಯಕ್ತಿ. ಮುಂಡೋಡಿ ಮೊಣ್ಣಪ್ಪ ಮನೆಯವರು ಗುಂಡಿನ ದಾಳಿ ನಡೆಸಿದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಣೇಶ್ ಈ ಹಿಂದೆ ಕೂಡ ಹಲವು ಮನೆ ಕಳ್ಳತನ ಮಾಡಿ ಸಿಕ್ಕಿಬಿದ್ದು, ಶಿಕ್ಷೆ ಅನುಭವಿಸಿದ್ದ. ಬಿಡುಗಡೆಯಾಗಿ ಬಂದ ನಂತರದಲ್ಲೂ ಈತ ಕಳ್ಳತನ ಮುಂದುವರಿಸಿದ್ದ ಎನ್ನಲಾಗಿದೆ.
ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ