ನಾಳೆಯಿಂದ ಖಾಸಗಿ ಶಾಲೆಗಳ ಆನ್ಲೈನ್, ಆಫ್’ಲೈನ್ ಕ್ಲಾಸ್ ಬಂದ್!!

ಬೆಂಗಳೂರು :  

     ನಾಳೆಯಿಂದ ಆನ್ಲೈನ್, ಆಫ್ಲೈನ್ ಕ್ಲಾಸ್ ಗಳನ್ನು ಬಂದ್ ಮಾಡಲಾಗುವುದು ಎಂದು ರುಪ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.

      ಸರ್ಕಾರಕ್ಕೆ ನಾವು 15 ಬೇಡಿಕೆಗಳನ್ನು ಇಟ್ಟಿದ್ದೇವೆ. ನಾಳೆ ಮತ್ತೆ ಶಿಕ್ಷಣ ಸಚಿವರಿಗೆ ನಮ್ಮ ಬೇಡಿಕೆಗಳನ್ನು ಮತ್ತೆ ತಿಳಿಸುತ್ತೇವೆ. ಈ ಬೇಡಿಕೆಗಳನ್ನು ಸರ್ಕಾರ 10 ರಿಂದ 15 ದಿನಗಳ ವರೆಗೆ  ಈಡೇರಿಸದಿದ್ದರೆ, ಆನ್ ಲೈನ್-ಆಫ್ ಲೈನ್ ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

     ರಾಜ್ಯದಾದ್ಯಂತ ಶಾಲೆಗಳನ್ನು ಬಂದ್ ಮಾಡಿ, ಜನವರಿ 6ರಿಂದ ಬೆಂಗಳೂರಿನಲ್ಲಿ ಒಕ್ಕೂಟಗಳು ಸತ್ಯಾಗ್ರಹ ಹೋರಾಟಕ್ಕೆ ಇಳಿಯಲಿವೆ. ಈ ಸಂಬಂಧ ಅಂತಿಮ ನಿರ್ಧಾರವನ್ನುೂ ರುಪ್ಸಾ ಸಂಸ್ಥೆ ಪ್ರಕಟ ಮಾಡಲಿದೆ. ಅಲ್ಲದೇ ಕ್ಯಾಮ್ಸ್​​ನ ಆರೋಪಕ್ಕೆ ಸ್ಪಷ್ಟೀಕರಣ ಕೂಡ ಕೊಡಲಿದೆ.

      ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಜನವರಿ 1ರ ಹೊಸ ವರ್ಷದಿಂದ ಬೋರ್ಡ್ ಪರೀಕ್ಷೆಗಳನ್ನು ಒಳಗೊಂಡಂತ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಆರಂಭಕ್ಕೆ ನಿರ್ಧಾರ ಕೈಗೊಂಡಿದೆ. ಇಂತಹ ಶಾಲಾ-ಕಾಲೇಜು ಆರಂಭದ ಹೊಸ್ತಿಲಲ್ಲಿ ಇರುವಂತ ರಾಜ್ಯ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap