ನಿವೇಶನಗಳ ಬಿಡುಗಡೆಗೆ ಲಂಚ : ಎಸಿಬಿಯಿಂದ 3 ಲಕ್ಷ ಹಣ ವಶ!!

 ಚಿಕ್ಕಬಳ್ಳಾಪುರ:

      ಭೂ ಪರಿವರ್ತನೆಗೊಂಡ ನಿವೇಶಗಳನ್ನು ಬಿಡುಗಡೆ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರದ ಇಬ್ಬರು ಸದಸ್ಯರು ಬರೋಬ್ಬರಿ 3 ಲಕ್ಷ ರೂ. ಲಂಚದ ಹಣ ಸ್ಪೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

      ಬಂಧಿತರ ಪೈಕಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಸಿವಿಲ್ ಇಂಜಿನಿಯರ್ ಹೆಚ್.ಆರ್.ಕೃಷ್ಣಪ್ಪ ಹಾಗೂ ಹಣ ಪಡೆಯುತ್ತಿದ್ದ ಅಚುತ್ ಕುಮಾರ್ ಎಂದು ಗುರುತಿಸಲಾಗಿದೆ.

      ಬೆಂಗಳೂರಿನ ಹೆಗಡೆ ನಗರದ ನಿವಾಸಿ ರಾಮಾಂಜನಪ್ಪ ಎಂಬುವರು ಎಸಿಬಿಗೆ ಈ ಕುರಿತು ದೂರು ನೀಡಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಕುಪ್ಪಳ್ಳಿ ಸಮೀಪ ಮಾಡಲಾಗಿರುವ ಹೊಸ ಬಡಾವಣೆಯಲ್ಲಿ ಈಗಾಗಲೇ ಶೇ.60 ನಿವೇಶನಗಳನ್ನು ಬಿಡುಗಡೆಗೊಳಿಸಿರುವ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ, ಉಳಿದ ಶೇ.40 ರಷ್ಡು ನಿವೇಶನಗಳ ಬಿಡುಗಡೆ ಮಾಡಲು 8 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಇಂದು ಮದ್ಯಾಹ್ನ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಹೆಚ್.ಆರ್.ಕೃಷ್ಣಪ್ಪ ಬೇಡಿಕೆಯಂತೆ ಮೊದಲ ಕಂತಾಗಿ ಅಚುತ್ ಕುಮಾರ್ ಕಚೇರಿಯಲ್ಲಿ 3 ಲಕ್ಷ ಲಂಚ ಸ್ಪೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

     ಡಿವೈಎಸ್ಪಿ ವೆಂಕಟೇಶ್ ನಾಯ್ಡ ಮಾರ್ಗದರ್ಶನದಲ್ಲಿ ಸಿಪಿಐ ಲಕ್ಮೀದೇವಮ್ಮ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿತು ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link