ಶಿರಸಿ:
ನಿರಾಶ್ರಿತ ಕೇಂದ್ರಕ್ಕೆ ಪರಿಹಾರ ಸಾಮಗ್ರಿಗಳನ್ನು ಪೂರೈಸಿ ಹಿಂದಿರುಗವ ವೇಳೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪರುವ ದುರ್ಘಟನೆ ಯಲ್ಲಾಪುರ ಬಾಳೆಹದ್ದು ಬಳಿ ನಡೆದಿದೆ.
ಮೈಸೂರಿನ ಎಬಿವಿಪಿ ಮುಖಂಡ, ಎಂಐಟಿಯಲ್ಲಿ ಉದ್ಯೋಗಿಯಾಗಿದ್ದ ರವಿಕುಮಾರ್, ಭೈರುಂಬೆ ಸೂರಿಮನೆಯ ಮಹಾಬಲೇಶ್ವರ ಹೆಗಡೆ, ಶಾರದಾ ಹೆಗಡೆ ಮೃತರು. ಮಾಧವ್ ಮತ್ತು ಶೇಖರ್ ಎಂಬುವವರು ಗಾಯಗೊಂಡಿದ್ದಾರೆ.
ರವಿಕುಮಾರ್ ಮತ್ತು ತಂಡದವರು ಕಿರವತ್ತಿ ನಿರಾಶ್ರಿತ ಕೇಂದ್ರಕ್ಕೆ ಪರಿಹಾರ ಸಾಮಗ್ರಿಗಳನ್ನು ಪೂರೈಸಿ, ವಾಪಸ್ ಬರುತ್ತಿರುವಾಗ ಈ ಘಟನೆ ಸಂಭವಿಸಿದೆ. ಶಿರಸಿ–ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಬಾಳೆಹದ್ದ ಕ್ರಾಸ್ ಬಳಿ ಕಾರು ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/08/acc.gif)