ಜೋಧ್‍ಪುರ :
ಜೀಪ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿಗಳು ಸೇರಿ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ರಾಜಸ್ತಾನದ ಜೋಧ್‍ಪುರ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.
ಇಂದು ಬೆಳಗ್ಗೆ ಫಲೋಡಿ ಬಲೋತ್ರಾ ಹೆದ್ದಾರಿಯಲ್ಲಿ ಬರುತ್ತಿದ್ದ ಬೊಲೆರೊ ಜೀಪ್ ಗೆ ಸೊಯಿಂಟ್ರಾ ಗ್ರಾಮದ ಬಳಿ ಟ್ರಕ್ ಡಿಕ್ಕಿ ಹೊಡೆದಿದೆ. ಜೀಪ್ ಲಾರಿಯ ಅಡಿಯಾಗಿದ್ದು ಪೂರ್ತಿಯಾಗಿ ಜಜ್ಜಿ ಹೋಗಿದೆ.
ಬಲೋತ್ರ ಗ್ರಾಮದ ನಿವಾಸಿಗಳು ರಾಮ ದೇವೋರ್ ಪ್ರದೇಶದಲ್ಲಿರುವ ರಾಮದೇವೋ ದೇವರಿಗೆ ಪೂಜೆ ಸಲ್ಲಿಸಲು ಕುಟುಂಬ ಸಮೇತ ಜೀಪಿನಲ್ಲಿ ಹೊರಟಿದ್ದು ಬಲೋತ್ರ-ಪಲೋಡಿ ರಾಷ್ಟ್ರೀಯ ಹೆದ್ದಾರಿ ತಲುಪುತಿದ್ದಂತೆ ಟ್ರಕ್ ಜೀಪಿನ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಂದು ಮಗು, 6 ಮಹಿಳೆಯರು, 4 ಪುರುಷರು ಮೃತರಾಗಿದ್ದಾರೆ. ಇದರಲ್ಲಿ ಕಳೆದ ಫೆಬ್ರವರಿ 27ರಂದು ಮದುವೆಯಾದ ನವ ಜೋಡಿಗಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು, ಆಡಳಿತ ಅಧಿಕಾರಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. 3 ಜನರ ಸ್ಥೀತಿ ಗಂಭೀರವಾಗಿದ್ದು ಅವರನ್ನು ಜೋಧ್ಪುರ್ನ ಎಮ್ಡಿಎಮ್ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ