ತಿಪಟೂರು:

ತಾನು ಮದುವೆಯಾಗಬೇಕಾಗಿದ್ದ ಯುವಕನ ಜೊತೆ ಬೈಕಿನಲ್ಲಿ ಜಾತ್ರೆಗೆ ಹೋಗುವ ವೇಳೆ ಬೈಕಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಕರಡಿಗ್ರಾಮ ಬಳಿ ನಡೆದಿದೆ.
ದಾಕ್ಷಾಯಣಿ(21) ಮೃತ ದುರ್ದೈವಿ. ಬೈಕಿನಲ್ಲಿ ಇಬ್ಬರು ಬೆಂಗಳೂರಿನಿಂದ ಅರಸಿಕೆರೆ ಜಾತ್ರೆಗೆ ಹೋಗುತ್ತಿದ್ದರು. ಈ ವೇಳೆ ತಿಪಟೂರು ತಾಲೂಕಿನ ಕರಡಿಗ್ರಾಮ ಬಳಿ ಬೈಕಿಗೆ ವೇಗವಾಗಿ ಹಿಂಬದಿಯಿಂದ ಲಾರಿ ಬಂದು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಯುವತಿಯ ಮೆದುಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬೈಕ್ ಸವಾರ ಶಿವರಾಜ್ ಗಂಭೀರವಾಗಿ ಗಾಯಗೊಂಡಿದ್ದು, ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತ ದಾಕ್ಷಾಯಣಿಯ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿತ್ತು. ಹೀಗಾಗಿ ತಾನು ಮದುವೆಯಾಗಬೇಕಾಗಿದ್ದ ಯುವಕನ ಜೊತೆ ಬೈಕಿನಲ್ಲಿ ಜಾತ್ರೆಗೆ ಹೋಗುವಾಗ ಮೃತಪಟ್ಟಿದ್ದಾಳೆ.
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.








