ಮೈಸೂರು:
ಕಾರು ಅಪಘಾತದಿಂದಾಗಿ ಆಸ್ಪತ್ರೆ ಸೇರಿರುವ ನಟ ದರ್ಶನ್ ಒಂದು ವರ್ಷ ಜಿಮ್ ಮಾಡುವಂತಿಲ್ಲ ಮತ್ತು ಭಾರ ಎತ್ತುವಂತಿಲ್ಲ. ಈ ಕಾರಣಗಳಿಂದ ಕಟ್ಟುಮಸ್ತಾದ ಮೈಕಟ್ಟು ಉಳಿಸಿಕೊಳ್ಳುವುದು ಕಷ್ಟ ಸಾಧ್ಯವಾಗಲಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಕೈ ಮೂಳೆ ಮುರಿದಿರುವ ಹಿನ್ನೆಲೆಯಲ್ಲಿ ಬಲಗೈ ಮೂಳೆಗೆ ಪ್ಲೇಟ್ ಅಳವಡಿಸಿದ್ದು, ಪ್ಲೇಟ್ ತೆಗೆಯಲು ಎರಡು ವರ್ಷ ಬೇಕಾಗಬಹುದು. ಆದರೆ ಅಲ್ಲಿವರೆಗೂ ದರ್ಶನ್ ಭಾರ ಎತ್ತುವಂತಿಲ್ಲ. ಸಾಹಸ ದೃಶ್ಯಗಳಲ್ಲಿ ಅಭಿನಯಿಸುವುದು ಕೂಡ ಅಪಾಯ ಎಂದು ಹೇಳಿದ್ದಾರೆ.
ನಾಲ್ಕು ವಾರ ಆರ್ಮ್ ಸ್ಲಿಂಗ್ ಹಾಕುವುದು ಕಡ್ಡಾಯವಾಗಿದ್ದು, ಕನಿಷ್ಠ ಒಂದು ತಿಂಗಳ ವಿಶ್ರಾಂತಿ ಬೇಕಾಗಿದೆ. ಬಲಗೈಗೆ ಹೆಚ್ಚಿನ ಕೆಲಸ ನೀಡುವಂತಿಲ್ಲ. ಎಂದು ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ