ರಾಕಿ ಭಾಯ್ ಬಾಡಿಗೆ ಮನೆ ಸಮಸ್ಯೆಗೆ ಮುಕ್ತಿ!

ಬೆಂಗಳೂರು: 
       ಸ್ಯಾಂಡಲ್ ವುಡ್ ನಟ ಯಶ್ ಕುಟುಂಬದ ವಿರುದ್ಧದ ಮನೆ ಬಾಡಿಗೆ ವಿವಾದ ಕೊನೆಗೂ ಅಂತ್ಯಗೊಳ್ಳುವ ಹಂತಕ್ಕೆ ಬಂದಿದೆ  ಎನ್ನಲಾಗಿದೆ. 
      ಹೈಕೋರ್ಟ್‌ ವಿಧಿಸಿದ್ದ ಗಡುವಿನ ಅನುಸಾರ ಚಿತ್ರನಟ ಯಶ್‌ ಅವರ ಕುಟುಂಬ ಸದ್ಯ ವಾಸಿಸುತ್ತಿರುವ ಮನೆಯ ಬಾಡಿಗೆ ಬಾಕಿ ಮೊತ್ತ 23 ಲಕ್ಷ ರೂ ಅನ್ನು ಮಾಲೀಕರಿಗೆ ಪಾವತಿಸಲು ಸಜ್ಜಾಗಿದೆ.

      ಈ ಬಗ್ಗೆ ಮಾಹಿತಿ ನೀಡಿರುವ ಮನೆಯ ವಾರಸುದಾರರ ಪರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ.ಟಿ.ನಾಣಯ್ಯ ಅವರು, ನಗರದ ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್‌ನ 6ನೇ ಕ್ರಾಸ್‌ಲ್ಲಿ 30X40ರ ಅಳತೆಯಲ್ಲಿರುವ ಮನೆಯನ್ನು ಖಾಲಿ ಮಾಡಲು ನಿರಾಕರಿಸಿ ಕೋರ್ಟ್‌ ಮೆಟ್ಟಿಲೇರಿದ್ದ ಯಶ್‌ ಅವರ ತಾಯಿ ಎ.ಪುಷ್ಪಾ, ಬಾಕಿ ಮೊತ್ತದ ಡಿ.ಡಿಯನ್ನು (ಡಿಮ್ಯಾಂಡ್‌ ಡ್ರಾಫ್ಟ್‌) ಕೊಡಲಿದ್ದಾರೆ. ಅಂತೆಯೇ 2019ರ ಮಾರ್ಚ್‌ 31ರೊಳಗೆ ಮನೆಯನ್ನು ಖಾಲಿ ಮಾಡಲಿದ್ದಾರೆ’ ಎಂದು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ