ಬೆಂಗಳೂರು:

ನಿವೃತ್ತ ಡಿವೈಎಸ್‌ಪಿ ಪುತ್ರ ಮತ್ತು ಗ್ಯಾಂಗ್ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ , ರೇಸ್ಕೋರ್ಸ್ ರಸ್ತೆಯ ಪಂಚತಾರ ಹೋಟೆಲ್ನಲ್ಲಿ ಬಳಿ ನಡೆದಿದೆ. ನಲಪಾಡ್ ರೌಡಿಸಂ ಮತ್ತೊಮ್ಮೆ ಕಣ್ಣುಮುಂದೆ ಬಂದಂತಾಗಿದೆ.
ಹೋಟೆಲ್ ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾಜಿ ಡಿವೈಎಸ್‌ಪಿ ಪುತ್ರನೊಬ್ಬ ಬಿಯರ್ ಬಾಟಲಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಮ್ಮಗೊಂಡನಹಳ್ಳಿ ನಿವಾಸಿ ಎನ್.ಯುವರಾಜ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ, ನಿವೃತ್ತ ಡಿವೈಎಸ್‌ಪಿ ಪುತ್ರ ಜಕ್ಕೂರು ನಿವಾಸಿ ಸುಮನ್, ವಿಕ್ರಮ್ ತಲೆ ಮರೆಸಿಕೊಂಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಘಟನೆ:
ಆರೋಪಿ ಸುಮನ್ ಡಿವೈಎಸ್‌ಪಿ ಕೋನಪ್ಪರೆಡ್ಡಿ ಅವರ ಪುತ್ರ, ಜಕ್ಕೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದಾನೆ. ಸೆಪ್ಟೆಂಬರ್ 8ರಂದು ರಾತ್ರಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ರಿನೈಸಾನ್ಸ್ ಪಂಚತಾರಾ ಹೋಟೆಲ್ ಗೆ ತನ್ನ ಸ್ನೇಹಿತರೊಂದಿಗೆ ಹೋಗಿದ್ದಾನೆ, ಅಂದು ಊಟ ಮುಗಿಸಿ ಕೈತೊಳೆದುಕೊಂಡು ಬರುತ್ತಿರುವಾಗ ಆತನಿಗೆ ಯುವರಾಜ್ ಕೈ ತಾಗಿದೆ ಅಷ್ಟಕ್ಕೇ ಗಲಾಟೆ ಆರಂಭಿಸಿದ ಸುಮನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








