ಬೆಂಗಳೂರು:
ಭಾರತದ ದೈತ್ಯ ಅಂತರ್ಜಾಲ ಆಧಾರಿತ ಮಾರಾಟ ಸಂಸ್ಥೆ ಅಮೆಜಾನ್ ಬರೋಬ್ಬರಿ 50,000 ಜನರಿಗೆ ಉದ್ಯೋಗ ನೀಡಲು ಮುಂದಾಗಿದೆ.
We believe we have a role to provide critical service to the community as we continue to fight the pandemic, while prioritizing safety of our associates. To meet customer needs we are creating close to 50,000 seasonal roles across our operations network.https://t.co/1HujHc4xFp pic.twitter.com/m23dEA80ii
— Amazon India News (@AmazonNews_IN) May 22, 2020
ಒಂದು ಕಡೆ ಬಹುತೇಕ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಲು ಆದ್ಯತೆ ನೀಡಿದ್ದರೆ, ಅಲ್ಲಲ್ಲಿ ಸಂಭ್ರಮದ ಸುದ್ದಿಗಳೂ ಕೇಳಿ ಬರುತ್ತಿವೆ. ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿರುವವರಿಗೆ ಸಂಭ್ರಮದ ಸುದ್ದಿ ನೀಡಿರುವ ಭಾರತದ ಅತಿ ದೊಡ್ಡ ಅಂತರ್ಜಾಲ ಆಧಾರಿತ ಮಾರಾಟ ಸಂಸ್ಥೆಗಳಲ್ಲಿ ಒಂದಾದ ಅಮೆಜಾನ್ ವಿವಿಧ ಹಂತದಲ್ಲಿ 50,000 ಉದ್ಯೋಗಿಗಳು ಬೇಕಾಗಿದ್ದಾರೆ ಎಂದು ಪ್ರಕಟಿಸಿದೆ.
ದೇಶದಲ್ಲಿ ಮನೆಗಳಿಗೆ ವಸ್ತುಗಳನ್ನು ತಲುಪಿಸಲು ವಿವಿಧ ಹಂತದ ಉದ್ಯೋಗಿಗಳು ಬೇಕಾಗಿದ್ದಾರೆ. ಮನೆಗೆ ವಸ್ತುಗಳನ್ನು ತಲುಪಿಸುವವರು, ಕಚೇರಿ ಕೆಲಸಗಾರರು, ಅರೆಕಾಲಿಕ ಕೆಲಸಗಾರರು ಬೇಕಾಗಿದ್ದಾರೆ ಎಂದು ಹೇಳಲಾಗಿದೆ.
ಕಂಟೈನ್‌ಮೆಂಟ್ ವಲಯಗಳನ್ನು ಹೊರತು ಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಇ-ಕಾಮರ್ಸ್ ಸಂಸ್ಥೆಗಳು ಕಾರ್ಯಾಚರಿಸಲು ಸರ್ಕಾರದ ನಿಯಮಾವಳಿಗಳಿಂದ ಅವಕಾಶ ದೊರೆತಿದೆ. ಲಾಕ್‌ಡೌನ್ ಆರಂಭದಲ್ಲಿ ತೀವ್ರ ಪೆಟ್ಟು ಅನುಭವಿಸಿರುವ ಇ-ಕಾಮರ್ಸ್ ಕಂಪನಿಗಳು ಇದೀಗ ವಹಿವಾಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
