ಆಂಬುಲೆನ್ಸ್ ನಲ್ಲಿ ಅಕ್ರಮ ಕಚ್ಚಾ ಹರಳು ಕಲ್ಲು ಸಾಗಾಟ!

ಮಡಿಕೇರಿ: 

      ಆಂಬುಲೆನ್ಸ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೆಲೆಬಾಳುವ ಕಚ್ಚಾ ಹರಳು ಕಲ್ಲುಗಳನ್ನು ಕೊಡಗು ಪೊಲೀಸರು ಪತ್ತೆ ಹಚ್ಚಿ, ಆರೋಪಿಗಳನ್ನು ಮಾಲು ಸಮೇತ ವಶಪಡಿಸಿಕೊಂಡಿದ್ದಾರೆ.

     ರಫೀವುಲ್ಲಾ ಖಾನ್, ಎಂ.ಎಂ. ಸಿರಾಜ್, ಸಿಕಂದರ್ ಹಾಗೂ ಮಹಮ್ಮದ್ ಅಲಿ ಎಂಬ ಆರೋಪಿಗಳನ್ನು ಬಂಧಿಸಿದ್ದು, ವಾಹನದಲ್ಲಿದ್ದಕಚ್ಚಾ ಹರಳು ಕಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ. 

      ಮಂಗಳವಾರ ತಡರಾತ್ರಿ ಮಡಿಕೇರಿಯಿಂದ ಕುಶಾಲನಗರದ ಕಡೆ 50 ಸಾವಿರ ರೂ. ಮೌಲ್ಯದ ಹರಳು ಕಲ್ಲುಗಳನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಅನ್ನು ಸುಂಟಿಕೊಪ್ಪ ಬಳಿ ಪೊಲೀಸರು ತಡೆಯಲು ಮುಂದಾಗಿದ್ದಾರೆ. ಈ ವೇಳೆ ನಿಲ್ಲಿಸದೆ ತೆರಳಿದಾಗ, ಅನುಮಾನಗೊಂಡು ಹಿಂಬಾಲಿಸಿ ಮಾದಾಪಟ್ಟಣ ಬಳಿ ಅಡ್ಡಗಟ್ಟಿದ್ದಾರೆ. ಈ ವೇಳೆ ಆಂಬುಲೆನ್ಸ್‌ನಲ್ಲಿ ಹರಳು ಕಲ್ಲು ಸಾಗಿಸುತ್ತಿರುವುದು ಕಂಡುಬಂದಿದೆ. 

      ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ಸಲೀಂ ಎಂಬುವವರ ಗೂಡ್ಸ್‌ ಆಟೋದಲ್ಲಿ ಮುಖ್ಯರಸ್ತೆಗೆ ತಂದು ನಂತರ ಮಡಿಕೇರಿಯ ಖಾಸಗಿ ಆಂಬ್ಯುಲೆನ್ಸ್‌ ಬಾಡಿಗೆ ಪಡೆದು ಸಾಗಣೆ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

      ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link