ಅನಂತ್ ಅಂತಿಮ ಯಾತ್ರೆ … ವಿಧಿವಿಧಾನ…!

ಬೆಂಗಳೂರು: 

       ಶ್ವಾಸಕೋಶದ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಹೆಚ್.ಎನ್. ಅನಂತ್ ಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ಚಾಮರಾಜಪೇಟೆಯ ಚಿತಾಗಾರದಲ್ಲಿ ನಡೆಯಲಿದೆ.

      ರಾಷ್ಟ್ರ, ರಾಜ್ಯದ ಗಣ್ಯಾತಿಗಣ್ಯ ನಾಯಕರು ಅವರ ಅಂತಿಮ ದರ್ಶನ ಪಡೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಅನಂತ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು.  

 ಮಂಗಳವಾರ :

 ಬೆ. 8ರಿಂದ:  ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನ
 ಬೆ. 10ರಿಂದ :ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ
 ಮಧ್ಯಾಹ್ನ 1: ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ

ಇಂದು ಅಡ್ವಾಣಿ, ಶಾ ಆಗಮನ:

        ಅನಂತ್‌ ಗುರು ಎಲ್‌ ಕೆ ಅಡ್ವಾಣಿ, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವರಾದ ಪ್ರಕಾಶ್‌  ಜಾಬ್ಡೇಕರ್‌, ಪಿಯೂಷ್‌ ಗೋಯಲ್‌, ಡಾ.ಹರ್ಷವರ್ಧನ್‌ ಮತ್ತಿತರರು ಮಂಗಳವಾರ ಅಂತಿಮ ದರ್ಶನ ಪಡೆಯಲಿದ್ದಾರೆ.

Image result for ananth kumar modi

      ಮಂಗಳವಾರ ಮಧ್ಯಾಹ್ನ 1 ಗಂಟೆ ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ಚಾಮರಾಜಪೇಟೆಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. 

      ಬಿಜೆಪಿ ಕಚೇರಿಯಲ್ಲಿ ಅನಂತಕುಮಾರ್ ಅವರ ಬೃಹತ್​ ಭಾವಚಿತ್ರವನ್ನು ಇರಿಸಲಾಗಿದ್ದು, ಅದರ ಎರಡೂ ಬದಿಯಲ್ಲಿ ಪಕ್ಷದ ಬಾವುಟ ಇಡಲಾಗಿದೆ.  ಪಾರ್ಥಿವ ಶರೀರ ಇಡಲು ಸಕಲ ಸಿದ್ಧತೆ ಮಾಡಲಾಗಿದೆ. ಒಂದು ಕಡೆ ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದರೆ ಇನ್ನೊಂದೆಡೆ ಅನಂತ್ ಕುಮಾರ್ ಅಮರ್ ರಹೇ ಎಂಬ ಘೋಷವಾಕ್ಯಗಳು ಕೇಳಿಬಂದಿತ್ತು.  ರಕ್ಷಣಾ ಇಲಾಖೆ ವಾಹನದಲ್ಲಿ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಗುವುದು. ಈಗಾಗಲೇ ಅನಂತಕುಮಾರ್​ ನಿವಾಸಕ್ಕೆ ಸೇನಾ ಕ್ಯಾಂಟರ್​ ಆಗಮಿಸಿದೆ.Related image

      10 ಗಂಟೆ ಬಳಿಕ ನ್ಯಾಷನಲ್​ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರವನ್ನು ರವಾನಿಸಲಾಗುವುದು. ಅಲ್ಲಿ 1 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಂತರ ಚಾಮರಾಜಪೇಟೆ ಚಿತಾಗಾರಕ್ಕೆ ಮೆರವಣಿಗೆ ತಂದು, ಅಂತಿಮ ವಿಧಿ ವಿಧಾನ ನೆರವೇರಿಸಲಾಗುವುದು. 

ಅಂತಿಮ ವಿಧಿವಿಧಾನಗಳು :

      ಪುರೋಹಿತ ಶ್ರೀನಾಥ ಶಾಸ್ತ್ರಿ ನೇತೃತ್ವದಲ್ಲಿ 45 ನಿಮಿಷ ಅಂತ್ಯಕ್ರಿಯೆ ಪೂಜಾ ವಿಧಿವಿಧಾನಗಳು ನಡೆಯಲಿವೆ. ಮೊದಲು ಗಂಗಾಜಲದಿಂದ ಪಾರ್ಥಿವ ಶರೀರ ಶುದ್ಧಿಕರಣ ನಡೆಯಲಿದ್ದು, ಬಳಿಕ ಪಾರ್ಥಿವ ಶರೀರಕ್ಕೆ ಹೊಸಬಟ್ಟೆ ಧಾರಣೆ ಮಾಡಲಾಗುತ್ತೆ. ಚಿತೆಗೆ 50 ಕೆಜಿ ತುಪ್ಪ, 10 ಕೆಜಿ ಕರ್ಪೂರ, ಬೆರಣಿ, ಗಂಧದ ಚಕ್ಕೆ, 1 ಟನ್ ಕಟ್ಟಿಗೆ ಬಳಸಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತೆ.

      ಅನಂತ್​ ಕುಮಾರ್ ಅಂತ್ಯಕ್ರಿಯೆಗೆ ಕರ್ಪೂರ ಮತ್ತು ಸುಗಂಧದ್ರವ್ಯಗಳನ್ನು ಬಳಸಲಾಗ್ತಿದೆ. ಕೇಂದ್ರ ಸಚಿವರ ಅಂತ್ಯಸಂಸ್ಕಾರ ಇರೋದ್ರಿಂದ ಇಂದು ಸಂಜೆ ತನಕ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಬೇರೆ ಶವಗಳ ಸಂಸ್ಕಾರಕ್ಕೆ ಅವಕಾಶ ಇರುವುದಿಲ್ಲ. ಈ ಬಗ್ಗೆ ಚಿತಾಗಾರದ ಸಿಬ್ಬಂದಿಗೆ ಬಿಬಿಎಂಪಿ ಆಯುಕ್ತರು ಸೂಚನೆ ಕೊಟ್ಟಿದ್ದಾರೆ. ಇನ್ನು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆಯೂ ಸೂಚನೆ ಕೊಟ್ಟಿದ್ದಾರೆ. ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ರುದ್ರಭೂಮಿಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

      ಹಿಂದು ಬ್ರಾಹ್ಮಣ ಸ್ಮಾರ್ತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದ್ದು,  ಅನಂತ್ ಕುಮಾರ್ ಅವರಿಗೆ ಗಂಡುಮಕ್ಕಳಿಲ್ಲದ ಕಾರಣ ಅವರ ಸಹೋದರ ನಂದಕುಮಾರ್ ಅವರೇ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ.

ಸಾರ್ವಜಕರಿಗೂ ಅಂತ್ಯಸಂಸ್ಕಾರ ವೀಕ್ಷಿಸಲು ಅವಕಾಶ:

     ಚಾಮರಾಜಪೇಟೆಯ ರುದ್ರಭೂಮಿಯ ಹೊರಭಾಗದಲ್ಲಿ ಎಲ್ ಇ ಡಿ ಸ್ಕ್ರೀನ್ ಮೂಲಕ ಅನಂತ್ ಕುಮಾರ್ ಅಂತ್ಯ ಸಂಸ್ಕಾರಕ್ಕೆ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ  ಕಲ್ಪಿಸಲಾಗಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

  

Recent Articles

spot_img

Related Stories

Share via
Copy link