ಬೆಂಗಳೂರು :
ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರು ವಿಧಿವಶರಾಗಿದ್ದು, ದೇಶ, ರಾಜ್ಯದ ಗಣ್ಯರು ಅನಂತ್ ಕುಮಾರ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಅನಂತ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಬಿಜೆಪಿ ಕಚೇರಿ ಇರಿಸಿದ ಬಳಿಕ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಬಿಜೆಪಿ ಕಾರ್ಯಕರ್ತರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಮಧ್ಯಾಹ್ನ 1 ಗಂಟೆಯ ಬಳಿಕ ಚಾಮರಾಜಪೇಟೆಯ ಟಿ.ಆರ್. ಮಿಲ್ ರುದ್ರಭೂಮಿಯಲ್ಲಿ ವೈದಿಕ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಕೆಲ ರಸ್ತೆ ಸಂಚಾರಗಳು ಬದಲಾವಣೆ ಆಗಿದೆ.
ಅನಂತ್ ಕುಮಾರ್ ನಿವಾಸದಿಂದ ಬಿಜೆಪಿ ಕಚೇರಿ:
ಅನಂತಕುಮಾರ್ ನಿವಾಸ – ಎಸ್‍ಪಿ ಸಮಾಜ್ ರಸ್ತೆ – ಬಸವನಗುಡಿ ಮೆಡಿಕಲ್ ಸೆಂಟರ್ ಬಳಿ ಎಡ ತಿರುವು – ಲಾಲ್‍ಬಾಗ್ ಪಶ್ಚಿಮ ದ್ವಾರ – ಆರ್.ವಿ.ರಸ್ತೆ – ಮಿನರ್ವ ಸರ್ಕಲ್ – ಭಾರತಿ ಜಂಕ್ಷನ್ – ಶಿವಾಜಿ ಜಂಕ್ಷನ್ – ಸ್ಟಾಕ್ 14 ಜಂಕ್ಷನ್ – ಎನ್.ಆರ್.ಸ್ಕ್ವೇರ್ – ಪೊಲೀಸ್ ಕಾರ್ನರ್ – ಮೈಸೂರು ಬ್ಯಾಂಕ್ ಬಲ ತಿರುವು -ಮಹಾರಾಣಿ ಜಂಕ್ಷನ್ – ಓಲ್ಡ್ ಹೈ ಗ್ರೌಂಡ್ ಪೊಲೀಸ್ ಸ್ಟೇಷನ್ ಜಂಕ್ಷನ್ – ಬಿ ನಾಟ್ ಟು ಜಂಕ್ಷನ್ – ಪಿಜಿ ಹಳ್ಳಿ ಜಂಕ್ಷನ್ – ಕಾವೇರಿ ಜಂಕ್ಷನ್ ಎಡತಿರುವು – ಭಾಷ್ಯಂ ಸರ್ಕಲ್ – ಸರ್ಕಲ್ ಮಾರಮ್ಮ ಜಂಕ್ಷನ್ ಎಡ ತಿರುವು – ಸಂಪಂಗಿ ರಸ್ತೆ – ಮೆಗ್ರಾಸ್ ರಸ್ತೆ – ಸಂಪಿಗೆ ರಸ್ತೆ – ಬಿಜೆಪಿ ಕಚೇರಿ
ಬಿಜೆಪಿ ಕಚೇರಿಯಿಂದ ನ್ಯಾಷನಲ್ ಕಾಲೇಜು ಮೈದಾನ:
ಬಿಜೆಪಿ ಕಚೇರಿ ಬಳಿ ಎಡ ತಿರುವು – ಕಾಡು ಮಲ್ಲೇಶ್ವರ ದೇಗುಲ ಬಳಿ ಬಲ ತಿರುವು – ಸಂಪಿಗೆ ರಸ್ತೆ ಬಳಿ ಬಲ ತಿರುವು – ಸ್ಯಾಂಕಿ ಟ್ಯಾಂಕಿ ರಸ್ತೆ – ಭಾಷ್ಯಂ ಸರ್ಕಲ್ – ಕಾವೇರಿ ಜಂಕ್ಷನ್ – ಪಿಜಿ ಹಳ್ಳಿ ಜಂಕ್ಷನ್ – ಬಿ ನಾಟ್ ಟು ಜಂಕ್ಷನ್ – ಓಲ್ಡ್ ಹೈ ಗ್ರೌಂಡ್ ಪೊಲೀಸ್ ಸ್ಟೇಷನ್ ಜಂಕ್ಷನ್ – ಎಲ್‍ಆರ್‍ಡಿ ಜಂಕ್ಷನ್ ಬಳಿ ಬಲ ತಿರುವು – ಸ್ಟಾಕ್ ಟೆನ್ ಜಂಕ್ಷನ್ – ಸಿಐಡಿ ಜಂಕ್ಷನ್ – ಮಹಾರಾಣಿ ಕಾಲೇಜ್ ಸರ್ವೀಸ್ ರೋಡ್ ಎಡ ತಿರುವು – ಕೆ.ಆರ್.ಸರ್ಕಲ್ – ನೃಪತುಂಗ ರಸ್ತೆ – ಪೊಲೀಸ್ ಕಾರ್ನರ್ – ಕಾರ್ಪೊರೇಷನ್ ಸರ್ಕಲ್ – ಎನ್.ಆರ್.ಸ್ಕ್ವೇರ್ ಬಳಿ ಎಡ ತಿರುವು – ದೇವನಾಗ ಜಂಕ್ಷನ್ ಬಳಿ ಬಲ ತಿರುವು – ಪೂರ್ಣಿಮಾ ಜಂಕ್ಷನ್ – ಊರ್ವಶಿ ಜಂಕ್ಷನ್ – ಸ್ಟಾಕ್ 35 ಜಂಕ್ಷನ್ – ವಾಣಿ ವಿಲಾಸ್ ರಸ್ತೆ – ಪಂಪ ಮಹಾಕವಿ ರಸ್ತೆ ಎಡ ತಿರುವು – ನ್ಯಾಷನಲ್ ಕಾಲೇಜು ಗ್ರೌಂಡ್
ನ್ಯಾಷನಲ್ ಕಾಲೇಜು ಮೈದಾನದಿಂದ – ರುದ್ರಭೂಮಿ:
ಪಂಪ ಮಹಾಕವಿ ರಸ್ತೆ ಎಡ ತಿರುವು – ರಾಮಕೃಷ್ಣ ಆಶ್ರಮ ಜಂಕ್ಷನ್ – ಬುಲ್ ಟೆಂಪಲ್ ರಸ್ತೆ – ಉಮಾ ಥಿಯೇಟರ್ ಜಂಕ್ಷನ್ – ಚಾಮರಾಜಪೇಟೆ ಜಂಕ್ಷನ್ – ಐಒಸಿ ಪೆಟ್ರೋಲ್ ಬಂಕ್ – ಟಿ.ಆರ್.ಮಿಲ್ ಜಂಕ್ಷನ್ – ವಿಠ್ಠಲ ದೇವಾಲಯ – ಚಾಮರಾಜಪೇಟೆಯ ರುದ್ರಭೂಮಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ