ಬೆಳಗಾವಿ:
ಮಗು ಅತ್ತಿದ್ದಕ್ಕೆ ಶಿಕ್ಷಕಿ ಬರೆ ಹಾಕಿರುವ ಹೀನ ಕೃತ್ಯವೊಂದು ಬೆಳಗಾವಿಯ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಾಲದಾರಗಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ.
ಏನೂ ಅರಿಯದ 3 ವರ್ಷದ ಮಗು ಅಳುತ್ತಿದೆ ಎಂಬ ಕಾರಣಕ್ಕೆ ಶಿಕ್ಷಕಿ ಬಲಗೈಯಿಗೆ ಬರೆ ಹಾಕಿ ವಿಕೃತಿತನ ಮೆರೆದಿದ್ದಾಳೆ ಎಂದು ಪೋಷಕರು ದೂರಿದ್ದಾರೆ.
ಶಿಕ್ಷಕಿ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪೋಷಕರು ದೂರು ನೀಡಿದ್ದಾರೆ. ದೂರು ಆಧರಿಸಿ ಅಂಗನವಾಡಿ ಶಿಕ್ಷಕಿಗೆ ನೋಟಿಸ್ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ