ತುಮಕೂರು:
ಶತಾಯುಷಿ ಶ್ರೀ ಸಿದ್ಧಗಂಗಾ ಶ್ರೀಗಳು ಇಂದು ಬೆಳಗ್ಗೆ ದೈವಾದೀನರಾಗಿದ್ದು, ತಮ್ಮ ಅಂತಿಮ ಆಸೆಯೊಂದನ್ನು ಕಿರಿಯ ಶ್ರೀಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆ ಕಳೆದಿದ್ದರು. ಹೀಗಾಗಿಯೇ ತಾವು ಮೃತಪಟ್ಟ ಸುದ್ದಿಯನ್ನು ಮಠದ ಮಕ್ಕಳು ಮಧ್ಯಾಹ್ನದ ಭೋಜನ ಸ್ವೀಕರಿಸಿದ ನಂತರ ಪ್ರಕಟಿಸಬೇಕು ಎಂದು ಮೊದಲೇ ಮಠದ ಸಿಬ್ಬಂದಿ ಹಾಗೂ ಕಿರಿಯ ಶ್ರೀಗಳಿಗೆ ಶ್ರೀಗಳು ತಿಳಿಸಿದ್ದರು.
ಹೀಗಾಗಿ ಶ್ರೀಗಳ ಆಶಯದಂತೆ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದರೂ ಅಧಿಕೃತವಾಗಿ ಮೃತಪಟ್ಟ ಸುದ್ದಿಯನ್ನು ಪ್ರಕಟಿಸಲಿಲ್ಲ. ಮಧ್ಯಾಹ್ನ ವಿದ್ಯಾರ್ಥಿಗಳ ಭೋಜನವನ್ನು ಸ್ವೀಕರಿಸಿದ ಬಳಿಕ ಮಧ್ಯಾಹ್ನ 1.50ಕ್ಕೆ ಅಧಿಕೃತವಾಗಿ ಶ್ರೀಗಳು ಲಿಂಗೈಕ್ಯರಾದ ಸುದ್ದಿಯನ್ನು ಪ್ರಕಟಿಸಲಾಯಿತು.
ಸಿದ್ಧಗಂಗೆಯ ಮಠದ ಮಕ್ಕಳಿಗೆ ತಂದೆ, ತಾಯಿ, ಗುರು ಮತ್ತು ದೇವರಾಗಿದ್ದ ಶ್ರೀಗಳು ತಮ್ಮ ಅಂತಿಮ ಗಳಿಗೆಯಲ್ಲೂ ಮಠದ ಬಗ್ಗೆಯೇ ಚಿಂತಿಸುತ್ತಿದ್ದರು ಎನ್ನುವುದು ಶ್ಲಾಘನೀಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ