ಶಿವಮೊಗ್ಗ : ಮನೆಯೊಂದರಲ್ಲಿ ಶಂಕಿತ ಉಗ್ರನ ಬಂಧನ!!

ಶಿವಮೊಗ್ಗ:

      ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸುರಾನಿ ಗ್ರಾಮದಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಶಂಕಿತ ಉಗ್ರನೋರ್ವನನ್ನು ಬಂಧಿಸಿದ್ದಾರೆ.

      ಬಂಧಿತ ಶಂಕಿತ ಉಗ್ರ ಇದಕ್ಕೂ ಮುನ್ನ ಗಲ್ಫ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗ್ತಿದ್ದು, ತೀರ್ಥಹಳ್ಳಿ ತಾಲೂಕಿನ ಸುರಾನಿ ಗ್ರಾಮದಲ್ಲಿ ಸ್ಯಾಟಲೈಟ್ ಫೋನ್ ಬಳಸಿದ ಆಧಾರದ ಮೇಲೆ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್​) ಶಂಕಿತನನ್ನು ಬಂಧಿಸಿ ವಿಚಾರಣೆ ನಡೆಸಿದೆಯಂತೆ.

      ಪಟ್ಟಣದಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿ‌ರುವ ಪುಟ್ಟ ಗ್ರಾಮದಲ್ಲಿ ಇತ್ತೀಚೆಗೆ ಶಂಕಿತ ಉಗ್ರ ನೆಲೆಸಿದ್ದ ಎನ್ನಲಾಗಿದ್ದು,

      ಎಟಿಎಸ್ ಅಧಿಕಾರಿಗಳು​ ಉಗ್ರನನ್ನು ವಿಚಾರಣೆಗೆ ಒಳಪಡಿಸಿದ್ದು, ಶಂಕಿತ ಉಗ್ರನ ಬಂಧನದ ಬಗ್ಗೆ ಇನ್ನೂ ಪೊಲೀಸ್ ಇಲಾಖೆ ಖಚಿತ‌ಪಡಿಸಿಲ್ಲ. ಶಂಕಿತ ಉಗ್ರನ ಬಂಧನವಾಗಿದೆ ಎಂಬ ಸುದ್ದಿ ಹರಡಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

      ಈ ಘಟನೆಯಿಂದಾಗಿ ಕೆಲ ವರ್ಷಗಳ ಹಿಂದೆ ನಕ್ಸಲ್ ಚಟುವಟಿಕೆ ಹೆಚ್ಚಿದ್ದ ತಾಲೂಕಿನಲ್ಲಿ ಈಗ ಭಯೋತ್ಪಾದನೆ ಚಟುವಟಿಕೆಯೂ ಗರಿಬಿಚ್ಚಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ