ಬೆಂಗಳೂರು
ಎಲೆನ್ ಮೆಡೋಸ್ ಪ್ರೋಸ್ಥೆಟಿಕ್ ಹ್ಯಾಂಡ್ ಫೌಂಡೇಶನ್ ನಿಂದ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ತಯಾರಿಸಲಾದ ಕೃತಕ ಅಂಗವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ನೀಡುವ ಶಿಬಿರವನ್ನು ಬೆಂಗಳೂರು ನಗರದ ಫ್ರೆಂಡ್ಸ್ ವೆಲ್ ಫೇರ್ ಆರ್ಗನೈಸೇಶನ್ ಇದೇ 16 ರಂದು ಆಯೋಜಿಸಿದೆ.
ರೋಟರಿ ಇಂಟರ್ ನ್ಯಾಷನಲ್ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಈ ಉಚಿತ ಕೃತಕ ಕೈ ವಿತರಣಾ ಶಿಬಿರ ಬೆಂಗಳೂರಿನ ಆದರ್ಶ ಕಾಲೇಜಿನಲ್ಲಿ ನಡೆಯಲಿದೆ. ಉತ್ತಮ ಗುಣಮಟ್ಟದ ತೋಳು ಹಾಗೂ ಕೃತಕ ಅಂಗ ಇದಾಗಿದ್ದು ಇದನ್ನು ಬಳಸುವುದು ಬಹಳ ಸುಲಭ ಮತ್ತು ಅನುಕೂಲಕರವಾಗಿದೆ. ಮತ್ತು ಕೇವಲ 400 ಗ್ರಾಂ ತೂಕದ್ದಾಗಿದ್ದು, ಬರವಣಿಗೆ, ಊಟ ಮಾಡುವುದು, ಹಲ್ಲು ಉಜ್ಜುವುದು ಹಾಗೂ 4 ಕೆ.ಜಿ ತೂಕದ ಭಾರವನ್ನು ಎತ್ತುವಂತಹ ದಿನನಿತ್ಯದ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಆಘಾತಕ್ಕೀಡಾದ ವ್ಯಕ್ತಿಗೆ ಇದು ಸಹಾಯ ಮಾಡುತ್ತದೆ.
ಈ ಅಂಗಗಳನ್ನು ಮೊಣಕೈ ಕೆಳಗೆ 4 ರಿಂದ 5 ಇಂಚು ಸ್ಟಂಪ್ ಹೊಂದಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಇದರಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಔಷಧಿ ಒಳಗೊಂಡಿಲ್ಲ. ಈ ಸಂಪೂರ್ಣ ಪ್ರಕ್ರಿಯೆಗೆ ಕೇವಲ 2 ಗಂಟೆಗಳಷ್ಟು ಜೋಡಿಸುವುದು ಮತ್ತು ತರಬೇತಿಯ ಅಗತ್ಯವಿರುತ್ತದೆ ಅಷ್ಟೇ. ಪ್ರಪಂಚದಾದ್ಯಂತ 45 ಸಾವಿರಕ್ಕಿಂತಲೂ ಹೆಚ್ಚಿನ ಜನರು ಮತ್ತು ಭಾರತದಲ್ಲಿ 11 ಸಾವಿರಕ್ಕೂ ಹೆಚ್ಚು ಜನರ ಎಲ್ ಎನ್ -4 ಪ್ರೋಸ್ಥೆಟಿಕ್ ಆರ್ಮನ್ನು ಬಳಸುತ್ತಿದ್ದಾರೆ. ಇದರಿಂದಾಗಿ ತಾವೇ ದಿನನಿತ್ಯದ ಕಾರ್ಯಗಳನ್ನು ಮಾಡುತ್ತಾ ದಿನದಿಂದ ದಿನಕ್ಕೆ ಹೆಚ್ಚು ಸ್ವತಂತ್ರ ಜೀವನವನ್ನು ಮುನ್ನಡೆಸುವ ಮೂಲಕ ಲಾಭ ಪಡೆಯುತ್ತಿದ್ದಾರೆ.
ಫ್ರೇಂಡ್ಸ್ ವೆಲ್ ಫೇರ್ ಆರ್ಗನೈಸೇಷನ್ ಬೆಂಗಳೂರಿನ ಮೂಲದ ಲಾಭರಹಿತ ಸಂಸ್ಥೆಯಾಗಿದ್ದು, 1995 ರಿಂದ ಸುಟ್ಟಗಾಯಗಳ ಸಂತ್ರಸ್ತರಿಗೆ ಮತ್ತು ಸೀಳು ತುಳಿ ಹಾಗೂ ಅಂಗಳಿನ ರೋಗಿಗಳಿಗೆ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಒದಗಿಸುತ್ತಿದೆ. ಇವರ ಕಾರ್ಯಾಚರಣೆಯ 25 ನೇ ವರ್ಷದ ಅಂಗವಾಗಿ ರೋಟರಿ ಇಂಟರ್ ನ್ಯಾಷನಲ್ ನೊಂದಿಗೆ ತಮ್ಮ ಮುಂಗೈಯನ್ನು ಕಳೆದುಕೊಂಡ ಅಪಘಾತಗಳ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಿದ್ದಾರೆ.
ನಾಗಪುರ್ ನ ಲತಾ ಧೇಕ್ಲೇ ಎಲ್ ಎನ್ -4 ಕೈ ಪಡೆದ ಫಲಾನುಭವಿಗಳಲ್ಲಿ ಒಬ್ಬರು. ನಾನು 7 ವರ್ಷಗಳಿ ಹಿಂದೆ ಬೇಲೆ ಮಿಲ್ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಅಪಘಾತದಿಂದಾಗಿ ನನ್ನ ಕೈಯನ್ನು ಕಳೆದುಕೊಂಡಿದ್ದೇನೆ, ಆದರೆ ಈ ಕೃತಕ ಅಂಗಕ್ಕೆ ಧನ್ಯವಾದಗಳು. ನಾನು ಕಳೆದುಹೋದ ಅಂಗವನ್ನು ಹಿಂಪಡೆದಿದ್ದೇನೆ ಎಂದು ಅನಿಸುತ್ತದೆ. ನನ್ನ ಕುಟುಂಬಕ್ಕೆ ನಾನು ಬೆಂಬಲ ನೀಡಬೇಕಾಗಿತ್ತು ಮತ್ತು ಹೀಗಾಗಿ ಹೇಗೋ ಒಂದೇ ಕೈಯಲ್ಲಿ ಕೆಲಸ ಮಾಡಬೇಕಾಯಿತು. ಕೃತಕ ಅಂಗವನ್ನು ಪಡೆದಿರುವುದರಿಂದ ನನಗೆ ಬಹಳಷ್ಟು ಸಹಾಯ ಮಾಡಿದೆ ಎಂದು ಅವರು ಹೇಳಿದರು.
ಈ ಕೃತಕ ತೋಳಿನ ಅವಶ್ಯಕತೆ ಇರುವವರು ತಮ್ಮ ತೋಳಿನ ಫೋಟೋವನ್ನು ವಾಟ್ಯಾಪ್ ನಲ್ಲಿ ಕಳುಹಿಸಬಹುದು ಅಥವಾ ಫ್ರೇಂಡ್ಸ್ ವೆಲ್ ಫೇರ್ ಆರ್ಗನೈಸೇಶನ್ ಗೆ ಸಂಪರ್ಕಿಸಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








