



ರಮಾಪುರ ಗ್ರಾಮದ 27 ವರ್ಷದ ರಾಜೇಶ್ ಮೃತ ಬೈಕ್ ಸವಾರ. ರಮಾಪುರ ಗ್ರಾಮದಿಂದ ಗೌರಿಬಿದನೂರು ನಗರದ ಅಯ್ಯಪ್ಪನ ಸನ್ನಿಧಾನಕ್ಕೆ ರಾಜೇಶ್ ಬೈಕ್ ನಲ್ಲಿ ತೆರಳುತ್ತಿದ್ದರು. ಟಾಟಾ ಏಸ್ ವಾಹನ ಕಾದಲವೇಣಿ ಬಳಿಯ ಗ್ಯಾಸ್ ಗೋಡಾನ್ ನಿಂದ ಎಲ್.ಪಿ.ಜಿ ಸಿಲಿಂಡರ್ ಗಳನ್ನ ತುಂಬಿಕೊಂಡು ಕೋಟಾಲದಿನ್ನೆ ಕಡೆಗೆ ಸಾಗಿತ್ತು. ಮುದುಗೆರೆ ಬಳಿ ಸೇತುವೆ ಕಾಮಗಾರಿ ನಡೆಯುತ್ತಿದ್ದ ಪರಿಣಾಮ ಕಿರಿದಾದ ಸೇತುವೆ ಮೇಲೆ ವೇಗವಾಗಿ ಬಂದ ಬೈಕ್ ಸವಾರ ಟಾಟಾ ಏಸ್ ಗೆ ಡಿಕ್ಕಿ ಹೊಡೆದು ಸೇತುವೆ ಕೆಳಗೆ ಬೈಕ್ ಉರುಳಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದೇ ವೇಳೆ ಟಾಟಾ ಏಸ್ ವಾಹನ ಸಹ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಿಲಿಂಡರ್ ಗಳಿಗೆ ಹಾನಿಯಾಗಿಲ್ಲ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
