ಹುಬ್ಬಳ್ಳಿ :
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ‘ಆಪರೇಷನ್ ಆಡಿಯೋ’ದಲ್ಲಿ ಇರುವುದೇ ನನ್ನದೇ ಧ್ವನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.
ಈ ಮೂಲಕ ಆಪರೇಷನ್ ಆಡಿಯೋ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಯೂಟರ್ನ್ ಹೊಡೆದಿದ್ದು, ‘ನನ್ನ ಬಳಿ ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣ್ ಗೌಡ ಮಾತನಾಡಿದ್ದು ನಿಜ. ಆಡಿಯೊದಲ್ಲಿ ನಾನು ಮಾತನಾಡಿದ ವಿಚಾರಗಳು ಬೇರೆಯೇ ಇದೆ. ಆದರೆ ಕುಮಾರಸ್ವಾಮಿ ಅವರಿಗೆ ಬೇಕಾಗಿರುವುದನ್ನು ಮಾತ್ರ ಬಳಸಿಕೊಂಡು ಸತ್ಯವನ್ನು ಮರೆಮಾಚಿದ್ದಾರೆ. ಅವರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಕುತಂತ್ರ ಮಾಡಿ ನನ್ನ ಬಳಿ ಶಾಸಕ ನಾಗನಗೌಡ ಪುತ್ರ ಶರಣಗೌಡರನ್ನು ಕಳಿಸಿಕೊಟ್ಟು, ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡ್ತಿದ್ದಾರೆ ಎಂದು ಹೇಳುವ ಮೂಲಕ ಬಿಎಸ್ ವೈ ಆಪರೇಷನ್ ಕಮಲ ನಡೆಸುತ್ತಿರುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ.
ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆಮಾಚಿದ್ದಾರೆ’. ಆಡಿಯೊದಲ್ಲಿನ ಮುಂದುವರಿದ ಭಾಗವನ್ನು ಸೋಮವಾರ ಸದನದಲ್ಲಿ ಬಿಡುಗಡೆ ಮಾಡಿ, ಸಿಎಂ ಬಂಡವಾಳವನ್ನು ಬಯಲಿಗೆಳೆಯುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಎಚ್. ಡಿ ರೇವಣ್ಣ ಮಗ ಪ್ರಜ್ವಲ್ ಹೇಳಿಕೆ ಪ್ರಸ್ತಾಪಿಸಿ ‘ಸ್ವತಃ ಪ್ರಜ್ವಲ್ ರೇವಣ್ಣ ರವರೇ ನಮ್ಮದು ಸೂಟ್ ಕೇಸ್ ಸಂಸ್ಕೃತಿ, ಸೂಟ್‌ಕೇಸ್ ಇಲ್ಲದೇ ಯಾವುದೇ ಕೆಲಸ ಆಗಲ್ಲಾ ಎಂದು ಹೇಳಿದ್ದಾರೆ. ಈ ಬಗ್ಗೆ ವಿಡಿಯೊ ನನ್ನ ಬಳಿ ಇದೆ. ಸೋಮವಾರ ಅವರ ಬಂಡವಾಳ ಬಯಲು ಮಾಡುವೆ. ನನ್ನ ಬಳಿಯೂ ಆಡಿಯೋ ಇದೆ’ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ