ಮೈಸೂರು :
ಈ ಬಾರಿಯ ಮೈಸೂರು ಯುವ ದಸರಾ ಮಹೋತ್ಸವಕ್ಕೆ ಬ್ಯಾಡ್ಮಿಂಟನ್ ತಾರೆ ವಿಶ್ವಚಾಂಪಿಯನ್ ಪಿ.ವಿ. ಸಿಂಧು ಚಾಲನೆ ನೀಡಲಿದ್ದಾರೆ.
ಅಕ್ಟೋಬರ್ 1ರಂದು ಯುವ ದಸರಾ ಪ್ರಾರಂಭಗೊಳ್ಳಲಿದೆ. ಇದನ್ನು ಉದ್ಘಾಟಿಸಲು ಬರುವಂತೆ ಕೋರಿ ಸಿಎಂ ಬಿ.ಎಸ್. ಯಡಿಯೂರಪ್ಪ ನಾಲ್ಕು ದಿನಗಳ ಹಿಂದೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿರುವ ಅವರ ನಿವಾಸದಲ್ಲಿ ಸದಸ್ಯ ಪ್ರತಾಪ್ ಸಿಂಹ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸುವಂತೆ ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು.
Ecstatic! Myself n @SPmysuru Rishyanth extended the invitation of Hon. @CMofKarnataka to World Champion @Pvsindhu1 for the inauguration of Yuva Dasara! Thanq Damodar, IPS for all the help. We vl be eagerly waiting to receive Sindhu n her family on Oct 1st. Thank u @VSOMANNA_BJP! pic.twitter.com/8htDvcyy51
— Pratap Simha (@mepratap) September 14, 2019
ನಂತರ ಪಿ.ವಿ ಸಿಂಧು ಮತ್ತು ಅವರ ಕುಟುಂಬದವರ ಬರುವಿಕೆಗಾಗಿ ಕಾಯುತ್ತಿದ್ದೇವೆ ಅಂತಾ ಸಂಸದ ಪ್ರತಾಪ್ ಸಿಂಹ ಟ್ವೀಟ್ ಕೂಡಾ ಮಾಡಿದ್ದಾರೆ.
