ಉಡುಪಿ:

ನಗರದ ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಸಂಸ್ಥೆಯ ಮಾಲೀಕ ಮೃತಪಟ್ಟಿದ್ದಾರೆ.
ಮೃತನನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ಸ್ ಮಾಲೀಕ ರಾಬರ್ಟ್ ಫುರ್ಟಾಡೊ(53) ಎಂದು ಗುರುತಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಂದಿನಂತೆ ಬೆಳಗ್ಗೆ 8ಗಂಟೆಯ ಸುಮಾರಿಗೆ ಪ್ಯಾಕ್ಟರಿಯಲ್ಲಿ ಕೆಲಸ ಆರಂಭಗೊಂಡಿದ್ದು ಓವನ್ ಚಾಲನೆ ಮಾಡಲು ಪುಟಾರ್ಡೊ ಅವರು ಪ್ರಯತ್ನಿಸುತ್ತಿದ್ದಾಗ ಸಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂದರ್ಭ ನಾಲ್ವರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ಓರ್ವನಿಗೆ ಸಣ್ಣ ಗಾಯಗಳಾಗಿದೆ. ಸ್ಪೋಟದ ತೀವೃತೆಗೆ ತಲೆ ಛಿದ್ರಗೊಂಡಿದೆ.
ಗ್ಯಾಸ್ ಲೀಕ್ ನಿಂದಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಈ ಸಂಬಂಧ ಕೋಟಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








