ರಾಮನಗರ :
ಬಮೂಲ್ ಗೆ ಹಾಲು ಸರಬರಾಜು ಮಾಡುವ ಉತ್ಪಾದಕರಿಗೆ ನಾಳೆಯಿಂದ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ 2 ರೂ. ನೀಡಲಾಗುವುದು ಎಂದು ಬಮೂಲ್ ನಿರ್ದೇಶಕ ರಾಜಣ್ಣ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜಣ್ಣ, ಬಮೂಲ್‌ನ ಏಳಿಗೆಗಾಗಿ ಶ್ರಮಿಸುತ್ತಿರುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚಳವಾಗಿ ಹೊಸ ವರ್ಷಕ್ಕೆ ನೀಡಬೇಕೆಂದು ನಿರ್ದೇಶಕ ಸಭೆಯಲ್ಲಿ ಚರ್ಚೆ ನಡೆದಿತ್ತು. ಅದರಂತೆ ಬಮೂಲ್ ನಿರ್ದೇಶಕರ ಸಭೆಯಲ್ಲಿ ಜನವರಿ 1 ರಿಂದ ಬಮೂಲ್ ವ್ಯಾಪ್ತಿಯ ಹಾಲು ಸರಬರಾಜು ಮಾಡುವ ರೈತರಿಗೆ 2 ರೂ. ಹೆಚ್ಚಳವಾಗಿ ನೀಡಲು ನಿರ್ಧರಿಸಲಾಗಿದೆ ಎಂದರು.
ಇದರ ಜತೆಗೆ ಲೀಟರ್ ಹಾಲಿನ ದರವನ್ನು 3ರೂ ನಷ್ಟು ಹೆಚ್ಚಳ ಮಾಡಲು ಕೂಡ ಅದು ಸರ್ಕಾರಕ್ಕೆ ಮನವಿ ಮಾಡಿದೆ. ಬಮೂಲ್ ರೈತರಿಗೆ ಈ ಸಂತಸದ ಸುದ್ದಿ ನೀಡಿದೆಯಾದರೂ, ಇದರ ಹೊರೆ ಗ್ರಾಹಕರ ಮೇಲೆ ಬೀಳುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
