ಬೆಂಗಳೂರಿನ 2 ವಾರ್ಡ್ ಗಳು ಇಂದಿನಿಂದ 14 ದಿನಗಳವರೆಗೆ ಸೀಲ್ ಡೌನ್!!

ಬೆಂಗಳೂರು :

      ಸಿಲಿಕಾನ್ ಸಿಟಿಯಲ್ಲಿ ಮಾರಕ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾದ ಕಾರಣದಿಂದ ನಗರದ ಪಾದರಾಯನಪುರ ಹಾಗೂ ಬಾಪೂಜಿನಗರವನ್ನು ಮುಂದಿನ 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

      ಮಾರಕ ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ್ಯಂತ ಲಾಕ್ ಡೌನ್ ಘೋಷಿಸಿದ್ದು, ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ದಿನೇ ದಿನೇ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ವೈರಸ್ ಹರಡದಂತೆ ತಡೆಯಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

      ಬಿಬಿಎಂಪಿಯ 134, 135 ಸಂಖ್ಯೆಯ ವಾರ್ಡ್ ಗಳಾದ ಪಾದರಾಯನಪುರ ಹಾಗೂ ಬಾಪೂಜಿನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಪ್ರದೇಶಗಳು ಕಿರಿದಾಗಿದ್ದು, ಸಣ್ಣ ಸಣ್ಣ ರಸ್ತೆಗಳಿವೆ. ಹೀಗಾಗಿ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ. ಪಾದರಾಯನಪುರದಲ್ಲಿ 2 ದ್ವಾರಗಳನ್ನು ಮಾಡಲಾಗಿದ್ದು, ಹೊರಗೆ ಹೋಗುವವರು, ಒಳಗೆ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

      ಜನತೆ ಮನೆಗಳಿಂದ ಬರದಂತೆ ಸೂಚನೆ ನೀಡಿದ್ದು, ಇಡೀ ಪ್ರದೇಶದಲ್ಲಿ ಕೇವಲ ಎರಡು ರಸ್ತೆಗಳಲ್ಲಿ ಅಷ್ಟೇ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ. ತುರ್ತು ಸಂದರ್ಭಗಳಿದ್ದರಷ್ಟೇ ಜನತೆ ಹೊರ ಹೋಗಬಹುದಾಗಿದೆ. ಅಲ್ಲದೇ, ಅಗತ್ಯ ವಸ್ತುಗಳನ್ನು ಜನತೆಯ ಮನೆ ಬಾಗಿಲಿಗೆ ಪೂರೈಸಲಾಗುತ್ತಿದೆ ಎಂದು ಡಿಸಿಪಿ ರಮೇಶ್ ಬಾನೋತ್ ಕೂಡ ಸ್ಪಷ್ಟಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link