ಬೆಂಗಳೂರು:
ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ನಾಳೆ(ಸೆ.28) ನಡೆಯಲಿರುವ ಚುನಾವಣೆಯು ಬಿಬಿಎಂಪಿ ವೆಬ್‌ಸೈಟ್ ನಲ್ಲಿ ನೇರಪ್ರಸಾರಗೊಳ್ಳಲಿದೆ.
ಬಿಬಿಎಂಪಿ ಪ್ರಾದೇಶಿಕ ಅಧಿಕಾರಿ ಶಿವಯೋಗಿ ಕಳಸದ ಅವರು ಮೇಯರ್, ಉಪ ಮೇಯರ್ ಚುನಾವಣೆ ಕುರಿತು ಹಲವು ಮಾಹಿತಿ ನೀಡಿದ್ದಾರೆ.
12 ಸ್ಥಾಯಿ ಸಮಿತಿಯ ಅವಧಿ ಇನ್ನೂ ಮುಕ್ತಾಯವಾಗಿಲ್ಲ, ಹಾಗಾಗಿ ಆ ಸ್ಥಾನಗಳಿಗೆ ನಂತರದಲ್ಲಿ ಚುನಾವಣೆ ನಡೆಯುತ್ತದೆ, ಪ್ರತಿಯೊಬ್ಬರಿಗೂ ಪಾಸ್ ವ್ಯವಸ್ಥೆ ಇರುತ್ತದೆ, ಸಮಯಕ್ಕೆ ಸರಿಯಾಗಿ ಬಂದು ನಿಗದಿತ ಆಸನದಲ್ಲಿ ಕುಳಿತುಕೊಳ್ಬೇಕಾಗುತ್ತದೆ.
ಪಕ್ಷಗಳ ಬಲಾಬಲ..?
ಬಿಜೆಪಿಯಲ್ಲಿ ಕಾರ್ಪೊರೇಟರ್ ಗಳು 100, ಎಂಎಲ್ 11, ಎಂಎಲ್ ಸಿ 6, ಎಂಪಿ 3, ರಾಜಸಭಾ ಎಂಪಿ 2, ಸ್ವತಂತ್ರ 1 ಮತಗಳಿರುತ್ತದೆ.
ಕಾಂಗ್ರೆಸ್ ನಲ್ಲಿ ಕಾರ್ಪೊರೇಟರ್ ಗಳು 75, ಎಂಎಲ್ಎ 15, ಎಂಎಲ್ ಸಿ8, ಎಂಪಿ 2, ರಾಜ್ಯಸಭಾ ಎಂಪಿ 6 ಒಟ್ಟು 106 ಮತಗಳಿರುತ್ತವೆ.
ಜೆಡಿಎಸ್ ನಲ್ಲಿ ಕಾರ್ಪೊರೇಟರ್ ಗಳು 15, ಎಂಎಲ್ 2, ಎಂಎಲ್ ಸಿ 4,ಎಂಪಿ ೦, ರಾಜ್ಯಸಭಾ ಎಂಪಿ 1 ಜೆಡಿಎಸ್ ಒಟ್ಟು 22 ಮತಗಳಿರುತ್ತವೆ.ಸ್ವತಂತ್ರ 8 ಒಟ್ಟು ಬಿಬಿಎಂಪಿಯಲ್ಲಿ 259 ಮತಗಳಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ