ಝೀರೊ ಟ್ರಾಫಿಕ್ ಸಮರ್ಥಿಸಿಕೊಂಡ ಡಿಸಿಎಂ

 ಬೆಂಗಳೂರು:

      ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್ ಬಳಸಿಕೊಳ್ಳುವ ಅವಕಾಶವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.

      ಬೆಂಗಳೂರಿನಲ್ಲಿ ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸುತ್ತಿದ್ದ ಉಪಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ಮಾಧ್ಯಮದವರಿಗೆ ಉತ್ತರಿಸಿದರು. ಈ ಹಿಂದೆ ಇದ್ದವರು ಈ ಝೀರೋ ಟ್ರಾಫಿಕ್ ಬಳಸಿಕೊಳ್ಳದಿದ್ದರೆ, ನಾನು ಬಳಸಿಕೊಳ್ಳಬಾರದು ಅಂತಾ ಏನೂ ಇಲ್ವಲ್ಲ , ನನಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ ಎಂದು ಮಾಧ್ಯಮದವರ ವಿರುದ್ದ ಕಿಡಿ ಕಾರಿದರು.ನಾನು ಝೀರೋ ಟ್ರಾಫಿಕ್‍ನಲ್ಲಿ ಹೋದರೆ, ನಿಮಗ್ಯಾಕೆ ಹೊಟ್ಟೆ ಉರಿ ಎಂದು ಮಾಧ್ಯಮದರಿಗೆ ಪ್ರಶ್ನಿಸಿದರು. ಅಗತ್ಯವಿರುವುದ ರಿಂದಲೇ ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸುತ್ತಿರುವುದು ಎಂದು ಹೇಳಿದರು.  

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap