ಬೆಂಗಳೂರು:
ವಿಧಾನಪರಿಷತ್ತು ಸದಸ್ಯರಿಗೂ ಸಚಿವಸ್ಥಾನ ನೀಡುವಂತೆ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಎಲ್ಲ ರಾಜ್ಯಗಳಲ್ಲಿ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿ ಗೌರವ ನೀಡಿದೆ. ಹೀಗಾಗಿ ಪರಿಷತ್ ಹಿರಿಯ ಸದಸ್ಯರಿಗೆ ಅವಕಾಶ ನೀಡಬೇಕು. ಮೇಜು ತಟ್ಟಿ ಗಲಾಟೆ ಮಾಡುವವರಿಗೆ ಸ್ಥಾನ ನೀಡಬಾರದು. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯೇ. ಸಂಪುಟದಲ್ಲಿ 2 ಸ್ಥಾನ ಕುರುಬ ಸಮುದಾಯಕ್ಕೆ ನೀಡಬೇಕು.
ಕುರುಬ ಸಮುದಾಯದಲ್ಲಿ ಎಂ.ಟಿ.ಬಿ.ನಾಗರಾಜ್ ಹೆಸರೂ ಕೂಡಾ ಮುಂಚೂಣಿಯಲ್ಲಿದೆ. ನಾಗರಾಜ್ ಕರೆದುಕೊಂಡು ಬಂದು ಬೆಳೆಸಿದವರಲ್ಲಿ ನಾನು ಒಬ್ಬ. ನಮ್ಮ ಸಮುದಾಯದಲ್ಲಿ ಕಾಂಗ್ರೆಸ್‌ನಿಂದ ಮಂತ್ರಿ ಇಲ್ಲ. ನಮ್ಮ ಸಮಯದಾಯಕ್ಕೆ ಸರಿಯಾದ ಸ್ಥಾನಮಾನ ಸಿಗಬೇಕು. ನ್ಯಾಯಯುತ ನಮ್ಮ ಬೇಡಿಕೆಗೆ ಮನ್ನಣೆ ಸಿಗದೇ ಇದ್ದರೆ ಸರಿ ಎನಿಸುವುದಿಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
