ಬೆಂಗಳೂರು :
ಕೊರೋನಾ ಕಾರಣದಿಂದ ಬೆಂಗಳೂರಿನ ವಿಶ್ವ ಪ್ರಸಿದ್ಧ ಬೆಂಗಳೂರು ಕರಗ ಕೂಡಾ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಎಲ್ಲಾ ನಿಗಧಿಯಂತೆ ನಡೆದಿದ್ದರೇ ಇದೇ ಮಾರ್ಚ್ 31ಕ್ಕೆ ಕರಗ ಶಕ್ತ್ಯೋತ್ಸವ ಆರಂಭಗೊಂಡು, ಏಪ್ರಿಲ್ 8 ಕ್ಕೆ ಬೆಂಗಳೂರು ಕರಗ ಅದ್ದೂರಿಯಾಗಿ ನಡೆಯಬೇಕಿತ್ತು. ಆದರೆ, ವಿಶ್ವದಾದ್ಯಂತ ಜನರನ್ನು ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಸೋಂಕು ಬೆಂಗಳೂರಿಗೂ ಕಾಲಿಟ್ಟಿರುವುದರಿಂದ, ಈ ಬಾರಿಯ ಬೆಂಗಳೂರು ಕರಗ ನಡೆಯೋದು ಡೌಟ್ ಎನ್ನಲಾಗುತ್ತಿದೆ.
ಕರಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಒಂದು ವೇಳೆ ಕೊರೋನಾ ಸೋಂಕಿತರು ಅರಿವಿಲ್ಲದೆ ಕರಗ ಸಂಭ್ರಮದಲ್ಲಿ ಪಾಲ್ಗೊಂಡರೆ ದೊಡ್ಡದೊಂದು ಅನಾಹುತ ಸಂಭವಿಸಬಹುದು ಅನ್ನುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸರಳ ಮತ್ತು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಕರಗ ಆಚರಿಸುವುದು ಹೇಗೆ ಅನ್ನುವ ಕುರಿತಂತೆ ಚಿಂತನೆಗಳು ನಡೆಯುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ