ಬೆಂಗಳೂರು ನಿವಾಸಿಗಳಿಗೆ 1 ವರ್ಷದವರೆಗೆ ‘ಕಾವೇರಿ ನೀರು’ ಉಚಿತ!!

ಬೆಂಗಳೂರು :

     ಬೆಂಗಳೂರು ನಿವಾಸಿಗಳಿಗ 1 ವರ್ಷದವರೆಗೆ ‘ಕಾವೇರಿ ನೀರನ್ನು ಉಚಿತವಾಗಿ ನೀಡಲಾಗುವುದು ಎಂದು ಬಿಬಿಎಂಪಿ ತನ್ನ ಬಜೆಟ್ ನಲ್ಲಿ ತಿಳಿಸಿದೆ.

      ಇಂದು ಪ್ರಪ್ರಥಮ ಬಾರಿಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್ ಅನ್ನು ಮಂಡಿಸಲಾಯಿತು.  2020-21ನೇ ಸಾಲಿನ ಅಯವ್ಯಯದಲ್ಲಿ ಸಿಲಿಕಾನ್ ಸಿಟಿಯ ಜನರಿಗೆ ಬಂಪರ್ ಗಿಫ್ಟ್ ಘೋಷಣೆ ಮಾಡಲಾಗಿದೆ. ಅದರಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ಬಂಪರ್ ಗಿಫ್ಟ್ ನೀಡಿದ್ದು, ಒಂದು ವರ್ಷದವರೆಗೆ 10 ಸಾವಿರ ಲೀಟರ್ ವರೆಗೆ ಕಾವೇರಿ ನೀರಿಗೆ ಶುಲ್ಕ ವಿಧಿಸುತ್ತಿದ್ದಕ್ಕೆ ವಿನಾಯಿತಿ ನೀಡಲಾಗಿದೆ. ಉಚಿತ ಕಾವೇರಿ ನೀರು ಒದಗಿಸುವ ಕಾರ್ಯಕ್ರಮಕ್ಕೆ 43 ಕೋಟಿ ರೂ. ಒದಗಿಸಲಾಗಿದೆ.

      ಈ ಮೂಲಕ ಬೆಂಗಳೂರು ನಿವಾಸಿಗಳಿಗೆ ಬಂಪರ್ ಗಿಫ್ಟ್ ನೀಡಿರುವ ಬಿಬಿಎಂಪಿ, ಬೆಂಗಳೂರಿಗರಿಗೆ ಕಾವೇರಿ ನೀರು ಉಚಿತವಾಗಿ ನೀಡುವುದಾಗಿ ಬಿಬಿಎಂಪಿ ಬಜೆಟ್ ನಲ್ಲಿ ಘೋಷಣೆ ಮಾಡಿದೆ. 10 ಸಾವಿರ ಲೀಟರ್ ಕಾವೇರಿ ನೀರಿಗೆ ಶುಲ್ಕದಿಂದ ವಿನಾಯಿತಿ ನೀಡಿದೆ. 1 ವರ್ಷದವರೆಗೆ ಕಾವೇರಿ ನೀರು ಉಚಿತವಾಗಿ ನೀಡಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ 2.5 ಲಕ್ಷ ಕುಟುಂಬಗಳಿಗೆ ಪ್ರಯೋಜನ ಪಡೆಯಲಿವೆ ಎಂದು ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap