ಬೆಂಗಳೂರು :
ಇನ್ಮುಂದೆ ಪಾರ್ಕಿಂಗ್ ಜಾಗದ ಪುರಾವೆ ಇದ್ದರೆ ಮಾತ್ರ ಹೊಸ ಕಾರು ನೋಂದಣಿಯಾಗಲಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎನ್. ಶಿವಕುಮಾರ್ ತಿಳಿಸಿದ್ದಾರೆ.
ಹೌದು, ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ. ಸಮಸ್ಯೆಯನ್ನು ಕಡಿಮೆ ಮಾಡಲು ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
ಈ ನಿಯಮದ ಪ್ರಕಾರ ಬಿಬಿಎಂಪಿ NOC ಇದ್ದರೆ ಮಾತ್ರ ಕಾರು ನೋಂದಣಿಯಾಗಲಿದೆ. ಇಲ್ಲದಿದ್ದರೆ ಹೊಸ ಕಾರು ನೋಂದಣಿಗೆ ಅನುಮತಿ ಸಿಗುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ