ಬೆಂಗಳೂರು:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು-ಬೆಂಗಳೂರು ನಡುವೆ ಶೀಘ್ರ 10 ಪಥದ ಎಕ್ಸ್ ಪ್ರೆಸ್ ವೇ ಅಭಿವೃದ್ಧಿ ಪಡಿಸಲಿದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ಈ ಕುರಿತು ಉತ್ತರ ನೀಡಿದರು. “6 ಪಥದ ಹೆದ್ದಾರಿಯ ಜೊತೆಗೆ ಎರಡೂ ಕಡೆ ಎರಡು ಪಥದ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ” ಎಂದರು.
“ಮೊದಲ ಪ್ಯಾಕೇಜ್‌ನಲ್ಲಿ ಬೆಂಗಳೂರು-ನಿಢಘಟ್ಟ ತನಕ ಕಾಮಗಾರಿ ನಡೆಯಲಿದೆ. 2190 ಕೋಟಿ ಪ್ಯಾಕೇಜ್‌ನಲ್ಲಿ ಶೇ 67.5ರಷ್ಟು ಕಾಮಗಾರಿ ಪೂರ್ಣಗೊಂಡಿದೆ” ಎಂದು ಸಚಿವರು ವಿವರಣೆ ನೀಡಿದರು.
“ಎರಡನೇ ಪ್ಯಾಕೇಜ್‌ನಲ್ಲಿ 2283 ಕೋಟಿ ರೂ.ಗಳಲ್ಲಿ ನಿಢಘಟ್ಟ-ಮೈಸೂರು ನಡುವೆ ಕಾಮಗಾರಿ ನಡೆಯಲಿದೆ. ಈ ಪ್ಯಾಕೇಜ್‌ನಲ್ಲಿ ಶೇ 50.5ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಎರಡೂ ಕಾಮಗಾರಿಗಳು ಕ್ರಮವಾಗಿ ಶೇ 67.5 ಮತ್ತು ಶೇ 50.5 ಪೂರ್ಣಗೊಂಡಿವೆ. ಕೊರೊನಾ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಲಾಗಿದೆ. ಮೊದಲ ಯೋಜನೆ ಫೆ.2, 2022ಕ್ಕೆ ಮುಕ್ತಾಯ ಆಗಲಿದೆ. 2ನೇ ಯೋಜನೆ ಸೆ.7ಕ್ಕೆ ಮುಗಿಯಲಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತೇವೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ