ಬೆಂಗಳೂರು :
ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆಪ್ಟೆಂಬರ್ 1 ರಿಂದ ಟೋಲ್ ಶುಲ್ಕ ಹೆಚ್ಚಳವಾಗಲಿದೆ. ಟ್ರಕ್ ಹಾಗೂ ಬಸ್‌ಗಳು ಹಾದು ಹೋಗುವ ಶುಲ್ಕವನ್ನು ಕ್ರಮವಾಗಿ 10ರೂ., ಮತ್ತು 5 ರೂ. ಹೆಚ್ಚಿಸಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಶುಲ್ಕವನ್ನು ಪರಿಷ್ಕರಿಸಿದ್ದು, ಇದಕ್ಕೆ ಅಧಿಕೃತ ಒಪ್ಪಿಗೆಯೂ ದೊರೆತಿದೆ. ಇದರಿಂದ ನಿತ್ಯ ಪ್ರಯಾಣಿಸುವವರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.
ಮಾಸಿಕ ಪಾಸ್ ದರವನ್ನು 140ರೂ.ನಷ್ಟು ಹೆಚ್ಚಿಸಲಾಗಿದೆ. ಇನ್ನುಮುಂದೆ ಇವರು ತಿಂಗಳಿಗೆ 4,865 ರೂ. ಪಾವತಿಸಬೇಕಾಗುತ್ತದೆ. ಲಘು ವಾಣಿಜ್ಯ ವಾಹನಗಳ ಮಾಸಿಕ ಪಾಸ್ ದರವನ್ನು 75ರೂ.ಗೆ ಏರಿಸಲಾಗಿದೆ. ತಾವು ಬೆಳೆದ ತರಕಾರಿಗಳನ್ನು ನಿತ್ಯ ಮಾರುಕಟ್ಟೆಗೆ ಸಾಗಿಸುವ ರೈತರ ಮೇಲೆ ಇದರಿಂದ ಹೊರೆ ಹೆಚ್ಚಬಹುದು ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ