ನೆಲಮಂಗಲ : ಬ್ಯಾಂಕ್‌ಗೆ ತಂದ ಕೋಟಿ-ಕೋಟಿ ಹಣ ನೋಡಿ ದಂಗಾದ ಸಿಬ್ಬಂದಿ!!

ನೆಲಮಂಗಲ:

      1.90 ಕೋಟಿ ರೂ. ಹಣವನ್ನು ಬ್ಯಾಂಕ್‌ಗೆ ಕಟ್ಟಲು ಮೂವರು ವ್ಯಕ್ತಿಗಳು ಬಂದಿದ್ದರು. ಈ ಹಣ ನೋಡಿ ಬ್ಯಾಂಕ್‌ ಮ್ಯಾನೇಜರ್ ಸೇರಿ ಬ್ಯಾಂಕ್ ಸಿಬ್ಬಂದಿ ದಂಗಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

     ನೆಲಮಂಗಲ ಪಟ್ಟಣದ ICICI ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು, ನಂಬರ್ ಇಲ್ಲದ ಹೊಸ ಸ್ಕೋಡಾ ಕಾರಿನಲ್ಲಿ ಬಂದ ಮೂವರು ವ್ಯಕ್ತಿಗಳು 1.90 ಕೋಟಿ ಹಣ ಬ್ಯಾಂಕ್‌ಗೆ ಕಟ್ಟಲು ಗುರುವಾರ ( ಜುಲೈ 4, 2019) ರಂದು ಆಗಮಿಸಿದ್ದಾರೆ.

      ಹಣ ಕಂಡು ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನೆಲಮಂಗಲ ಟೌನ್ ಪೊಲೀಸರು ಈ ಮೂವರನ್ನು ವಿಚಾರಣೆ ನಡೆಸಿದ್ದಾರೆ.

      ಮೂರು ದೊಡ್ಡ ಬ್ಯಾಗ್‌ನಲ್ಲಿ ವ್ಯಕ್ತಿಗಳು ಹಣ ತಂದಿದ್ದರು. ಈ ಹಿನ್ನೆಲೆ ಈ ಕೋಟಿ ಕೋಟಿ ಹಣ ಯಾರಿಗೆ ಸೇರಿದ್ದು ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap