ಉಪ್ಪಿನಂಗಡಿ :
ನೀರು ಎಂದು ಬಾಟಲಿಯಲ್ಲಿದ್ದ ಪೆಟ್ರೋಲ್ ಅನ್ನು ಕುಡಿದು ಅಜ್ಜಿ ಸಾವನ್ನಪ್ಪಿದ ಘಟನೆ ಬಂಟ್ವಾಳದ ಪೆರ್ನೆ ಸಂಪದಕೋಡಿಯಲ್ಲಿ ಬುಧವಾರ ನಡೆದಿದೆ.
ಪದ್ಮಾವತಿ (79)ಮೃತರು. ಅವರು ಸೆ.26ರಂದು ಪೆರ್ನೆಯ ಮಗಳ ಮನೆಗೆ ಬಂದಿದ್ದರು. ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ಮನಯವರು ಬಾಟಲಿಯಲ್ಲಿ ಪೆಟ್ರೋಲ್ ತಂದಿಟ್ಟಿದ್ದರು.
ದೃಷ್ಟಿ ದೋಷದಿಂದ ಬಳಲುತ್ತಿದ್ದ ಪದ್ಮಾವತಿ ಅವರು ಪೆಟ್ರೋಲ್ ಇದ್ದ ಬಾಟಲಿಯನ್ನು ನೀರೆಂದು ಭಾವಿಸಿ ಕುಡಿದಿದ್ದಾರೆ. ಈ ಸಂದರ್ಭ ಅಸ್ವಸ್ಥರಾದ ಅವರನ್ನು ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಿಸದೇ ಬುಧವಾರ ಸಾವನ್ನಪ್ಪಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ