ಬೆಳಗಾವಿ:
ಹಂಗಾಮಿ ಸಭಾಪತಿ ಆಗಿದ್ದ ಅವರು ಸಭಾಪತಿಯಾಗಿ ಆಯ್ಕೆ ಆಗುವ ಆಸೆ ಹೊಂದಿದ್ದರು ಆದರೆ ಇಂದು ಕಾಂಗ್ರೆಸ್ ಪಕ್ಷವು ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿ ಆಗಿ ಆಯ್ಕೆ ಆದ ಕೂಡಲೇ ಬಸವರಾಜ ಹೊರಟ್ಟಿ ಅವರು ಭಾವುಕರಾದರು. ಬರುತ್ತಿದ್ದ ಅಳುವನ್ನು ತಡೆದುಕೊಳ್ಳಲು ಯತ್ನಿಸಿ ಸದನದಿಂದ ಹೊರನಡೆದರು.
ಈ ಬಗ್ಗೆ ಆಪ್ತರ ಬಳಿ ನೋವು ತೋಡಿಕೊಂಡ ಹೊರಟ್ಟಿ, ಕಾಂಗ್ರೆಸ್ ನವರನ್ನ ನಂಬಿಕೊಂಡು ನಾನು ಮೋಸ ಹೋದೆ, ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸುತ್ತದೆ ಅಂದಿಕೊಂಡಿದ್ದೆ. ಇದ್ರಿಂದ ನಾನು ಯಾವುದೇ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಿಲ್ಲ. ಬೇಷರತ್ ಬೆಂಬಲದಿಂದ ಸಭಾಪತಿಯಾಗಿ ನೇಮಿಸುತ್ತೇವೆ ಅಂತ ಬರವಸೆ ನೀಡದ್ದರಿಂದ ನಾನು ಸುಮ್ಮನಾಗಿದ್ದೇ ಎಂದು ಹೇಳಿಕೊಂಡಿದ್ದಾರೆ.
ಇನ್ನೂ ತಮ್ಮದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಕೂಡಾ ಸಂಪುಟ ರಚಿಸುವಾಗ ಇದರ ಬಗ್ಗೆ ಚರ್ಚಿಸೋಣ ಅಂತ ಹೇಳಿದ್ದರು. ಆದ್ರೆ ಈ ಬಗ್ಗೆ ಯಾವೊಬ್ಬ ನಾಯಕರು ಚಕಾರ ಎತ್ತುತ್ತಿಲ್ಲ. ಎಲ್ಲ ಬೆಳವಣಿಗೆಯಿಂದ ನನಗೆ ನೋವಾಗಿದೆ. ಇನ್ನು ಮುಂದೆ ಸರ್ಕಾರದ ವಿಚಾರದಲ್ಲಿ ನಾನು ತಟಸ್ಥನಾಗಿರುತ್ತೇನೆ ಎಂದು ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ